ಜಿಲ್ಲೆ

ಅಶೋಕ ನಿಡವಣಿ ಹೃದಯ ಶ್ರೀಮಂತಿಕೆ ವ್ಯಕ್ತಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ಇನ್ನೊಬ್ಬರ ಏಳಿಗೆ ಕಂಡು ಖುಷಿ ಪಡುವ ಹೃದಯವಂತಿಕೆ ಉಳ್ಳವರು ಸಮಾಜದ ದೃಷ್ಟಿಯಲ್ಲಿ ದೊಡ್ಡವರಾಗಿರುತ್ತಾರೆ. ಅಂತಹ ಹೃದಯ ಶ್ರೀಮಂತಿಕೆ ದಿ. ಅಶೋಕ ನಿಡವಣಿ ಅವರಲ್ಲಿತ್ತು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿಶ್ರಾಂತ ಡಿ.ಎಂ. ನಿಡವಣಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಹೊಸಳ್ಳಿಯ ಶ್ರೀ ಬೂದೀಶ್ವರ ಸ್ವಾಮೀಜಿ ದತ್ತಿ ನಿಮಿತ್ತ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅಶೋಕ ನಿಡವಣಿ ಸಾಧನೆ ಮತ್ತು ಕೊಡುಗೆ: ಒಂದು ಸ್ಮರಣೆ ಕುರಿತು ಮಾತನಾಡಿದರು.

ಶಾಲಾ ಹಂತದಲ್ಲೇ ಅವರಿಗೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವ ಇತ್ತು. ಹಠವಾದಿ ಮಾತ್ರವಲ್ಲ ಸ್ವಾಭಿಮಾನಿ ಆಗಿದ್ದರು. ನೊಂದವರಿಗೆ, ಬೆಂದವರಿಗೆ, ಸರ್ವಸಾಮಾನ್ಯರಿಗೆ ಧ್ವನಿಯಾಗಿದ್ದವರು. ನಿಜ ಅರ್ಥದಲ್ಲಿ ಅವರದು ಸಾರ್ಥಕ ಹಾಗೂ ಪರಿಪೂರ್ಣ ಬದುಕು. ದುಡಿಮೆಯಲ್ಲಿ ದೇವರನ್ನು ಕಂಡವರಾಗಿದ್ದರು. ಅಪಾರ ಸ್ನೇಹಿತರ ಬಳಗ ಹೊಂದಿದ್ದ ಅವರು ವಿವಿಧ ಸಂಘ, ಸಂಸ್ಥೆಗಳ ಜತೆಗೆ ಅವಿನಾಭಾವ ಸಂಬಂಧ ಹೊಂದಿ ಜನಮಾನಸದಲ್ಲಿ ಉಳಿದವರಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಎಂ. ಹುರುಕಡ್ಲಿ ಮಾತನಾಡಿದರು. ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ದತ್ತಿದಾನಿ ಪರ ಪ್ರಭಾ ಅಶೋಕ ನಿಡವಣಿ ಮಾತನಾಡಿದರು.

ಬಸವಪ್ರಭು ಹೊಸಕೇರಿ, ಡಾ. ಮಹೇಶ ಹೊರಕೇರಿ, ಡಾ. ಲಿಂಗರಾಜ ಅಂಗಡಿ, ಶ್ರೀಶೈಲ ನಿಡವಣಿ, ಮಡಿವಾಳಪ್ಪ ಶಿರಿಯನ್ನವರ, ರಾಜು ಮರಳಪ್ಪನವರ, ಶಾಂತವೀರ ಬೆಟಗೇರಿ, ಶಿವಶರಣ ಕಲಬಶೆಟ್ಟರ, ವಿ.ಸಿ. ಸವಡಿ, ಮುಕ್ತಾ ಸವದಿ, ಸುರೇಶ ಹಾಲಭಾವಿ, ಬಸವಂತಪ್ಪ ತೋಟದ, ನಿಡವಣಿ ಕುಟುಂಬಸ್ಥರು, ಇತರರು ಇದ್ದರು.

ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.