ಜಿಲ್ಲೆ

ಅಶೋಕ ಜನಮನ ಚಪ್ಪರ ಮುಹೂರ್ತ

Mangaluru - Nishantha Narayana

ಪುತ್ತೂರು: ರೈ ಎಸ್ಟೇಟ್ ಎಜುಕೇಶನಲ್ ಟ್ರಸ್ಟ್ ಆಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಪ್ರಯುಕ್ತ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅ.೨೦ರಂದು ನಡೆಯುವ ಅಶೋಕ ಜನಮನ-೨೦೨೫ ಕಾರ್ಯಕ್ರಮದ ಚಪ್ಪರ ಮುಹೂರ್ತ ಭಾನುವಾರ ನಡೆಯಿತು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಕಾರ್ಯಕ್ರಮದಲ್ಲಿ ೧ ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇಟ್ಟುಕೊಂಡಿದ್ದು, ಈ ನಿಟ್ಟಿನಲ್ಲಿ ತಯಾರಿಗಳನ್ನು ನಡೆಸಲಾಗುತ್ತಿದೆ. ೪ ಕೋಟಿ ರೂ. ವೆಚ್ಚದಲ್ಲಿ ಕಾರ್ಯಕ್ರಮ ನಡೆಯಲಿದೆ. ೨೦ ಕೌಂಟರ್‌ನಲ್ಲಿ ಊಟದ ವ್ಯವಸ್ಥೆ, ೩೦ ಕೌಂಟರ್‌ನಲ್ಲಿ ವಸ್ತ್ರ ಹಾಗೂ ಉಡುಗೊರೆ ವಿತರಣೆ ನಡೆಯಲಿದೆ. ೫೦ ಮಂದಿಯಿಂದ ದೋಸೆ ತಯಾರಿ ನಡೆಯಲಿದೆ. ಹಿರಿಯ ನಾಗರಿಕರಿಗೆ, ಮಕ್ಕಳನ್ನು ಹಿಡಿದು ಬಂದ ಮಹಿಳೆಯರಿಗೆ ಬೇರೆಯೇ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ನವರಾಜ್ ಭಟ್ ಅಮೈ ನೇತೃತ್ವದಲ್ಲಿ ಚಪ್ಪರ ಮುಹೂರ್ತದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಶೋಕ ಜನಮನ ಕಾರ್ಯಾಕ್ರಮದ ಯಶಸ್ವಿಗೆ ಪ್ರಾರ್ಥನೆ ಸಲ್ಲಿಸಲಾಯಿತು.

ಪ್ರಮುಖರಾದ ಸುಮಾ ಅಶೋಕ್ ಕುಮಾರ್ ರೈ, ಸುದೇಶ್ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಎಂ.ಬಿ.ವಿಶ್ವನಾಥ ರೈ, ನಳಿನಿ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಶಿವರಾಮ ಆಳ್ವ ಸಾಜ, ರೇಣುಕಾ ಮುರಳೀಧರ ರೈ, ಜಯಪ್ರಕಾಶ್ ಬದಿನಾರು, ಚಂದ್ರಶೇಕರ ಕಲ್ಲುಗುಡ್ಡೆ, ಯೋಗೀಶ್ ಅಮಾನಿ ಮಠಂತಬೆಟ್ಟು, ಕೃಷ್ಣ ಪ್ರಸಾದ್ ಬೊಳ್ಳಾವು, ನಿಹಾಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.