ಬೈಂದೂರು ಉತ್ಸವದಲ್ಲಿ ಭಾನುವಾರ ಉಡುಪಿ ಪೇಜಾವರ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನ ಸ್ವಾಮೀಜಿ ಧಾರ್ಮಿಕ ಉಪನ್ಯಾಸ ನೀಡಿದರು. ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ, ಶಾಸಕ ಗುರುರಾಜ್ ಗಂಟಿಹೊಳೆ, ಪ್ರೊ.ಪವನ್ ಕಿರಣಕೆರೆ, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್, ನಾಗರಾಜ್ ಪಾಣಿ ವಾಲ್ತೂರು ಇದ್ದರು.  
ಜಿಲ್ಲೆ

ಸಂಸ್ಕೃತಿ, ಸಂಸ್ಕಾರ ಬದುಕು ಕಟ್ಟುವ ಮಾರ್ಗ

ಬೈಂದೂರು: ಪ್ರಸ್ತುತ ಹಿರಿಯರ ಆಸ್ತಿ, ಭೂಮಿ, ಒಡವೆ, ಹಣ ಇವೆಲ್ಲದರಲ್ಲಿಯೂ ನಾವು ಭಾಗವನ್ನು ಕೇಳುತ್ತೇವೆ. ಇದೆಲ್ಲ ನಶ್ವರವಾದದ್ದು, ಪರಂಪರಾನುಗತವಾಗಿ ಹಿರಿಯರಿಂದ ಜೀವನಾಮೃತವಾಗಿ ಬಂದಿರುವ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರ, ಸಂಪ್ರದಾಯ, ಆಚರಣೆ ಮುಂದುವರಿಸಿಕೊಂಡು ಹೋಗಬೇಕಿರುವುದು ಇಂದಿನ ಅನಿವಾರ್ಯತೆ, ಇದು ಬದುಕನ್ನು ಕಟ್ಟಿಕೊಳ್ಳುವ ಮಾರ್ಗ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿ ಹೇಳಿದರು.

ಬೈಂದೂರು ಉತ್ಸವದಲ್ಲಿ ಭಾನುವಾರ ಧಾರ್ಮಿಕ ಉಪನ್ಯಾಸ ನೀಡಿದರು. ಧಾರ್ಮಿಕ ಮುಖಂಡ ಬಸ್ರೂರು ಅಪ್ಪಣ್ಣ ಹೆಗ್ಡೆ ಮಾತನಾಡಿದರು. ಶಾಸಕ ಗುರುರಾಜ್ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪವನ್ ಕಿರಣಕೆರೆ, ವಿದ್ವಾನ್ ಸುಬ್ರಹ್ಮಣ್ಯ ಭಟ್ ಗುಂಡಿಬೈಲ್, ನಾಗರಾಜ್ ಪಾಣಿ ವಾಲ್ತೂರು ವಿವಿಧ ಧರ್ಮಾಧಾರಿತ ವಿಷಯಕ್ಕೆ ಸಂಬಂಧಿಸಿದಂತೆ ಪ್ರವಚನ ನೀಡಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎನ್.ಗೋವಿಂದ ಅಡಿಗ, ಕೆ.ಎನ್.ಸುಬ್ರಹ್ಮಣ್ಯ ಅಡಿಗ, ಕೆ.ಶ್ರೀಧರ ಅಡಿಗ, ಸಮೃದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಸ್.ಸುರೇಶ್ ಶೆಟ್ಟಿ ಉಪ್ಪುಂದ, ಬೈಂದೂರು ತಾಪಂ ಕಾರ್ಯನಿರ್ವಹಣಾಧಿಕಾರಿ ಭಾರತಿ ಎನ್., ಉತ್ಸವದ ಸಹ ಸಂಚಾಲಕ ಗಣೇಶ ಉಪ್ಪುಂದ ಇದ್ದರು. ಯು.ಸಂದೇಶ್ ಭಟ್ ಉಪ್ಪುಂದ ಸ್ವಾಗತಿಸಿದರು. ಅಕ್ಷತಾ ಗಿರೀಶ್ ಐತಾಳ್ ನಿರೂಪಿಸಿದರು.

ದೈವಸ್ಥಾನಗಳು ರಾಜಕೀಯ ತೆವಲುಗಳಿಗೆ ಸಿಲುಕಿ ಧರ್ಮದ ಉದ್ದೇಶ ಮೆರೆಯುತ್ತಿದೆ. ಧರ್ಮ ಉಳಿಯಬೇಕಾದರೆ ದೇವಸ್ಥಾನಗಳು ಸರ್ಕಾರದ ಹಿಡಿತದಿಂದ ಸ್ವತಂತ್ರರಾಗಬೇಕಾದ ಅರ್ನಿವಾಯತೆ ಇದೆ. ಧಾರ್ಮಿಕತೆ, ಆಚಾರ ವಿಚಾರ, ಸಂಪ್ರದಾಯಗಳ ಬಗ್ಗೆ ಏನೂ ತಿಳಿವಳಿಕೆ ಇಲ್ಲದವರು ಇಂದು ದೇವಸ್ಥಾನದ ಸಮಿತಿಯಲಿದ್ದು, ಆಡಳಿತ ನಡೆಸುತ್ತಿರುವುದು ದುರಂತ. -ಬಸ್ರೂರು ಅಪ್ಪಣ್ಣ ಹೆಗ್ಡೆ ಧಾರ್ಮಿಕ ಮುಖಂಡ https://www.vijayavani.net/beach-festival-at-padubidre-on-23rd-and-24th https://www.vijayavani.net/sudhakar-appointed-as-muniyalu-college-principal