ಜಿಲ್ಲೆ

ಕವನ ಸಂಕಲನ ಆಶಾವಾದಿ ಬಿಡುಗಡೆ

Dharwada - Basavaraj Idli

ಹುಬ್ಬಳ್ಳಿ: ಶಿವಯೋಗಿ ಸುರೇಬಾನ ಅವರ ಆಶಾವಾದಿ ಕವನ ಸಂಕಲನ ಬಿಡುಗಡೆ ಸಮಾರಂಭ ಜು. 7ರಂದು ಬೆಳಗ್ಗೆ 11ಕ್ಕೆ ಇಲ್ಲಿಯ ನವನಗರದ ಭಗಿನಿ ನಿವೇದಿತಾ ಶಾಲೆಯಲ್ಲಿ ಏರ್ಪಾಟಾಗಿದೆ.

ನವನಗರ ಹಿರಿಯ ನಾಗರಿಕರ ಕಲ್ಯಾಣ ಟ್ರಸ್ಟ್, ಪ್ರೋಬಸ್ ಕ್ಲಬ್ ಮತ್ತು ಪಂಚಾರಿ ನಗರದ ನಿವಾಸಿಗಳ ಅಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಜರುಗಲಿದೆ.

ಪ್ರೋಬಸ್ ಕ್ಲಬ್ ಅಧ್ಯಕ್ಷ ಶಿವಪ್ಪ ನಿರಾವರಿ ಕವನ ಸಂಕಲನ ಲೋಕಾರ್ಪಣೆ ಮಾಡುವರು.

ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ, ಎಚ್.ವಿ. ಹುದ್ದಾರ ಪಾಲ್ಗೊಳ್ಳುವರು.

ನಿವೃತ್ತ ಪ್ರಾಧ್ಯಾಪಕ ಪ್ರೊ. ಎಚ್.ವಿ. ಕಲ್ಲನಗೌಡರ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.