ಯರಗಟ್ಟಿ: ರಾಷ್ಟ್ರೀಯ ಅಂಧತ್ವ ಮತ್ತು ದೃಷ್ಟಿ ಮಾಂಧ್ಯತೆ ನಿಯಂತ್ರಣ ಕಾರ್ಯಕ್ರಮದಡಿ ಆಶಾಕಿರಣ ಯೋಜನೆ ಬಡವರು ಮತ್ತು ಗ್ರಾಮೀಣ ಜನರಿಗೆ ಕನ್ನಡಕ ವಿತರಣೆ ಶಸ್ತ್ರಚಿಕಿತ್ಸೆ ಒಳಗೊಂಡಿದೆ ಎಂದು ೇತ್ರ ಆರೋಗ್ಯ ಶಿಣಾ-ಧಿಕಾರಿ ಐ.ಆರ್.ಗಂಜಿ ತಿಳಿಸಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರ ಗುರುವಾರ ಹಮ್ಮಿಕೊಂಡಿದ್ದ ಆಶಾಕಿರಣ ಯೋಜನೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ಕಾಯಂ ನಿವಾಸಿಗಳು, ಆರ್ಥಿಕವಾಗಿ ಹಿಂದುಳಿದವರು ಮತ್ತು ಕಣ್ಣಿನ ಸಮಸ್ಯೆ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಉಚಿತ ಕಣ್ಣಿನ ತಪಾಸಣೆ, ಕನ್ನಡಕ ಕಾಂಟಾಕ್ಟ್ ಲೆನ್ಸ್ ಮತ್ತು ಶಸ್ತ್ರಚಿಕಿತ್ಸೆ ಈ ಯೋಜನೆಯಡಿ ಒದಗಿಸಲಾಗುವುದು ಎಂದರು.
ಡಾ.ಬಿ.ಎಸ್.ಬಳ್ಳೂರ ಮಾತನಾಡಿ, ಆಶಾ ಕಾರ್ಯಕರ್ತೆಯರು ಮನೆಯಲ್ಲಿ ಪ್ರಾಥಮಿಕ ಪರೀೆ ಮಾಡಿದ ಬಳಿಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದ್ವೀತಿಯ ಹಂತದ ಪರೀೆ ಮಾಡಿ ಅಗತ್ಯ ಸೇವೆ ನೀಡಲಾಗುವುದು ಎಂದರು.
ನೇತ್ರ ತಜ್ಞ ಡಾ.ಸುರೇಶ ಹಿತ್ತಲಮನಿ ಮಾತನಾಡಿದರು. ಡಾ.ಆರ್.ಬಿ.ಯರಜರ್ವಿ, ಪಪಂ ಮುಖ್ಯಾಧಿಕಾರಿ ಭಜಂತ್ರಿ, ಆರೋಗ್ಯ ರಾ ಸಮಿತಿ ಸದಸ್ಯರಾದ ಭಾಸ್ಕರ್ ಹಿರೇಮೆತ್ರಿ, ಉಮೇಶ ಮಾಗುಂಡನವರ, ಪರಮೇಶ ಚಕ್ರಕೋಟಿ, ಪಪಂ ಸದಸ್ಯರಾದ ನಿಖಿಲ ಪಾಟೀಲ, ಸಲೀಂ ಜಮಾದಾರ, ಬಸವರಾಜ ಮಳಗಲಿ, ಎಂ.ಎನ್.ಕತ್ತಿ, ಮಂಜುನಾಥ ಸಿಂಗನ್ನವರ, ಸುನೀಲ ಕಾಶನ್ನವರ, ಮಹಾಂತೇಶ ಹಿರೇಮಠ, ಪ್ರಕಾಶ ಮಾಂಗ, ಎಸ್.ಬಿ.ಬೆಂಡಿಗೇರಿ, ಆಶಾ ಕಾರ್ಯಕರ್ತೆಯರು ಇದ್ದರು.