ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ನಗರದ ಎನ್.ಆರ್.ಬಡಾವಣೆಯ ಶ್ರೀ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಶ್ರೀ ಪಾಂಡುರಂಗ ರುಕುಮಾಯಿ ದೇವಸ್ಥಾನ ಟ್ರಸ್ಟ್ ಮತ್ತು ಭಾವಸಾರ ಕ್ಷತ್ರಿಯ ಸಮಾಜದಿಂದ ಜು.6ರಂದು ಆಷಾಢ ಶುದ್ಧ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 7ಗಂಟೆಗೆ ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಪಂಢರಾಪುರ ಸಂಪ್ರದಾಯದಂತೆ ಶ್ರೀ ಪಾಂಡುರಗಸ್ವಾಮಿಯ ಪಾದ ಸ್ಪರ್ಶ, ಸಂಜೆ 4ರಿಂದ 5ರವರೆಗೆ ಶ್ರೀ ಶ್ರೀನಿವಾಸ ಭಜನಾ ಮಂಡಳಿಯಿಂದ ವಿಷ್ಣುಸಹಸ್ರನಾಮ ಮತ್ತು ಭಕ್ತಿ ಗೀತೆ, 5ರಿಂದ 6ರವರೆಗೆ ಶ್ರೀ ವೈಷ್ಣವಿ ಭಜನಾ ಮಂಡಳಿಯಿಂದ ಭಕ್ತಿ ಗೀತೆ , ಮಹಾ ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ಇರಲಿದೆ. ಜುಲೈ 7ರ ಸೋಮವಾರ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ್ ಮತ್ತು ಭಾವಸಾರ ಕ್ಷತ್ರಿಯ ಸಮಾಜ ತಿಳಿಸಿದೆ.