ಜಿಲ್ಲೆ

ಜಿಲ್ಲಾದ್ಯಂತ ಆಷಾಢ ಮಾಸದ ಪೂಜೆ: ದೇವಸ್ಥಾನಗಳಿಗೆ ಹರಿದುಬಂದ ಭಕ್ತರ ದಂಡು

ಕೆ.ಎನ್.ರಾಘವೇಂದ್ರ

ಮಂಡ್ಯ: ಕೊನೆ ಆಷಾಢ ಮಾಸದ ಶುಕ್ರವಾರದ ಅಂಗವಾಗಿ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯಿತು.

ನಗರದ ಪೊಲೀಸ್ ಕ್ವಾಟ್ರಸ್‌ನಲ್ಲಿರುವ ಶಕ್ತಿದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಹಲವು ಧಾರ್ಮಿಕ ಕೈಂಕರ್ಯ ನಡೆದವು. ಬೆಳಗ್ಗೆಯಿಂದಲೇ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ತಾಲೂಕಿನ ಹೊಳಲು ಗ್ರಾಮದಲ್ಲಿರುವ ಚಿತ್ತಾಳಮ್ಮ ಹಾಗೂ ಪಟ್ಟಲದಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು. ದೇವರಿಗೆ ವಿಶೇಷವಾಗಿ ಹೂವು ಹಾಗೂ ಅರಿಶಿನ ಅಲಂಕಾರ ಮಾಡಲಾಗಿತ್ತು. ಮಾರಮ್ಮ ದೇವಸ್ಥಾನದಲ್ಲಿ ಮೂರ್ತಿಗೆ ವರಹಾ ಅಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಇದೇ ವೇಳೆ ಪ್ರಸಾದ ವಿನಿಯೋಗ ಮಾಡಲಾಗಿತ್ತು. ಚಿತ್ತಾಳಮ್ಮ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಕಾಂತ್, ನರಸಿಂಹಮೂರ್ತಿ ಇತರರಿದ್ದರು.