ಹಗರಿಬೊಮ್ಮನಹಳ್ಳಿ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಆಷಾಢ ಏಕಾದಶಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಗಿತ್ತು. 
ಜಿಲ್ಲೆ

ಆಷಾಢ ಏಕಾದಶಿ ಅದ್ದೂರಿ

Kopala - Desk - Eraveni

ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀ ಪಾಂಡುರಂಗ ದೇವಸ್ಥಾನದಲ್ಲಿ ಬುಧವಾರ ಆಷಾಢ ಏಕಾದಶಿ ಅದ್ದೂರಿಯಾಗಿ ನಡೆಯಿತು.

ಬೆಳಗಿನ ಜಾವ 5ಗಂಟೆಯಿಂದ ಶ್ರೀಪಾಂಡುರಂಗ ರುಕ್ಮಿಣಿ ಮೂರ್ತಿಗಳಿಗೆ ವಿಶೇಷ ಬೆಳ್ಳಿ ಕವಚಗಳಿಂದ ಅಲಂಕರಿಸಿ, ಗುಲಾಬಿ ಹಾಗೂ ತುಳಸಿ ಹಾರಗಳಿಂದ ಸಿಂಗರಿಸಲಾಗಿತ್ತು. ಆಷಾಢ ಏಕಾದಶಿ ಅವಧಿಯನ್ನು ಚಾತುರ್ಮಾಸ ಹಾಗೂ ಆಷಾಢ ಏಕಾದಶಿ ಎಂದು ಕರೆಯಲಾಗುತ್ತದೆ.

ಈ ಸಮಯದಲ್ಲಿ ಪಂಢರಾಪುರಕ್ಕೆ ಭಕ್ತರು ಯಾತ್ರೆ ಕೈಗೊಳ್ಳುವುದರಿಂದ ಇದನ್ನು ಪಂಢರಾಪುರ ಏಕಾದಶಿ ಅಂತಲು ಕರೆಯುವರು. ಇದು ತೀರ್ಥಯಾತ್ರಿಗಳ ಉಪವಾಸದ ಸಮಯವಾಗಿರುತ್ತದೆ. ಇಂದು ಎಲ್ಲ ಪಾಂಡುರಂಗ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತವೆ. ಭಕ್ತರಿಗೆ ಶ್ರೀ ವಿಠ್ಠಲ ಹಾಗೂ ರುಕ್ಮಿಣಿ ಪಾದಸ್ಪಶರ್ಕ್ಕೆ ಅವಕಾಶ ಕಲ್ಪಿಸಿಕೊಡಲಾಗಿರುತ್ತದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಪಿ.ರಾಮಚಂದ್ರರಾವ್ ತಿಳಿಸಿದರು.