ಜಿಲ್ಲೆ

ಕೌಡ್ಲೆ ಪಟ್ಟಲದಮ್ಮ ದೇವಿಗೆ ಆಷಾಢ ಮಾಸದ ವಿಶೇಷ ಪೂಜೆ

ಮದ್ದೂರು: ಆಷಾಢ ಮಾಸದ ಮೊದಲ ಶುಕ್ರವಾರದ ಅಂಗವಾಗಿ ತಾಲೂಕಿನ ಕೌಡ್ಲೆ ಗ್ರಾಮದ ಶಕ್ತಿದೇವತೆ ಪಟ್ಟಲದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು.

ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ಧಾರ್ಮಿಕ ಕೈಂಕರ್ಯ ನಡೆಯಿತು. ಪ್ರಧಾನ ಅರ್ಚಕ ನವೀನ್ ಗೋಪಾಲ್ ನೇತೃತ್ವದಲ್ಲಿ ದೇವಿಗೆ ಲಲಿತಾ ಸಹಸ್ರನಾಮ, ಶ್ರೀಚಕ್ರಕ್ಕೆ ಕುಂಕುಮಾರ್ಚನೆ ಪೂಜೆ ಮಾಡಲಾಯಿತು. ಅಂತೆಯೇ ವಿವಿಧ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಅಂತೆಯೇ ಅಭಿಷೇಕ ಆಯೋಜಿಸಲಾಗಿತ್ತು. ಆಷಾಢ ಹಿನ್ನೆಲೆಯಲ್ಲಿ ಬೇರೆ ಬೇರೆ ಜಿಲ್ಲೆಗಳಿಂದಲೂ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಹಾಗೂ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.

ಆಗಮಿಸಿದ್ದ ಎಲ್ಲರಿಗೂ ಪುಳಿಯೊಗರೆ, ಸಿಹಿಪೊಂಗಲ್ ಪ್ರಸಾದ ವಿತರಿಸಲಾಯಿತು. ಗ್ರಾಮದ ಮುಖಂಡರಾದ ಸ್ವಾಮಿ ಬೋಜೇಗೌಡ, ಶ್ರೀನಿವಾಸ್, ಶ್ರೀಧರ್, ನಾರಾಯಣಸ್ವಾಮಿ, ಕೆಂಪರಾಜು, ರಾಜೀವ ಇತರರಿದ್ದರು.