ನಂಜನಗೂಡು: ತಾಲೂಕಿನ ಸುತ್ತೂರು ಗ್ರಾಮದ ವೈಷ್ಣವಿ ಶಂಕರ್ ಟಿ ಸ್ಟಾಲ್ ಹಾಗೂ ಶ್ರೀ ದೊಡ್ಡಮ್ಮತಾಯಿ ಆಟೋ ಚಾಲಕರ ಸಂಘದ ವತಿಯಿಂದ ಶುಕ್ರವಾರ ಆಷಾಢ ಶುಕ್ರವಾರ ವಿಶೇಷ ಪೂಜೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲ ಭಕ್ತರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಗ್ರಾಮದ ಗೌಡರಾದ ಶಿವರಾತ್ರಿ ಸ್ವಾಮಿ, ಯಜಮಾನರಾದ ಸಿದ್ದಪ್ಪ ನಾಯಕ, ಗ್ರಾಮ ಪಂಚಾಯತಿ ಸದಸ್ಯರಾದ ರಂಗಪ್ಪ ನಾಯಕ, ಮಾದನಾಯಕ, ಆಲತ್ತೂರು ಸೋಮಣ್ಣ, ಕುಮಾರ, ಮಾದನಾಯಕ ಅಟೆಂಡರ್ ಶಿವಣ್ಣ, ಸುತ್ತೂರು ಕೆಎಸ್‌ಆರ್‌ಟಿಸಿ ಅಧಿಕಾರಿ ಬಸವರಾಜ್, ಸೇಟು ಮಾತಾಜಿ, ಯಜಮಾನ್ ಚಿಕ್ಕ ಸ್ವಾಮಿ, ಅಂಗಡಿ ವೀರಣ್ಣ, ಜಗದೀಶ್, ಎಡಕೊಳ ನಾಗಣ್ಣ, ಬೊಕ್ಕಳ್ಳಿ ರಘು, ಸರ್ಕಾರಿ ಶಾಲೆ ಮುಖ್ಯ ಶಿಕ್ಷಕ ನಾಗರಾಜ್, ಶ್ರೀ ದೊಡ್ಡಮ್ಮತಾಯಿ ಆಟೋ ಚಾಲಕರ ಸಂಘದ ಅಧ್ಯಕ್ಷ ಎಸ್.ಆರ್. ಮಾದೇವ್, ಉಪಾಧ್ಯಕ್ಷ ರಂಗಸ್ವಾಮಿ ನಾಯಕ ಮತ್ತಿತರರು ಇದ್ದರು.