ಕಂಪ್ಲಿ ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಆಷಾಢ ಏಕಾದಶಿ ನಿಮಿತ್ತ ವಾರಕರಿಗಳು ವಿಶೇಷ ಪೂಜೆ ಸಲ್ಲಿಸಿದರು. ವಾರಕರಿಗಳಾದ ದೊಡ್ಡ ರಂಗಪ್ಪ, ವಿರುಪಣ್ಣಸ್ವಾಮಿ, ವೀರೇಶಪ್ಪ, ಸಂತರಾದ ಟಿ.ವಿರುಪಣ್ಣ, ಡಿ.ಆರ್.ಪಾಂಡುರಂಗ ಇತರರಿದ್ದರು. 
ಜಿಲ್ಲೆ

ಆಷಾಡ ಏಕಾದಶಿ ವಿಶೇಷ ಪೂಜೆ

ರುದ್ರಪ್ಪ ವಾಲಿ

ಕಂಪ್ಲಿ: ರುಕ್ಮಿಣಿ ಪಾಂಡುರಂಗ ದೇವಸ್ಥಾನದಲ್ಲಿ ಪಂಡರಾಪುರ ಬ್ರಹ್ಮರಥೋತ್ಸವ ನಿಮಿತ್ತ ಭಾನುವಾರ ಆಷಾಢ ಏಕಾದಶಿಯನ್ನು ಶ್ರದ್ಧೆ ಭಕ್ತಿಗಳಿಂದ ಆಚರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು.

ದೇವಸ್ಥಾನದಲ್ಲಿ ಗಂಗೆಪೂಜೆಯೊಂದಿಗೆ ರುಕ್ಮಿಣಿ ಪಾಂಡುರಂಗ ಪ್ರತಿಮೆಯ ಪಲ್ಲಕ್ಕಿ ಸೇವೆ, ಅಖಂಡ ವಿಠ್ಠಲ ವೀಣೆ ಸೇವೆ, ಭಜನಾ ಸೇವೆ ನಡೆಯಿತು. ಸದ್ಭಕ ್ತರು ರುಕ್ಮಿಣಿ ಪಾಂಡುರಂಗರ ದರ್ಶನ ಪಡೆದು ಹಣ್ಣು, ಹೂ, ಕಾಯಿ ಸಮರ್ಪಿಸಿದರು. ರುಕ್ಮಿಣಿ ಪಾಂಡುರಂಗ ಪ್ರತಿಮೆಗಳನ್ನು ತುಳಸಿ, ಪುಷ್ಪಮಾಲೆಗಳಿಂದ ಅಲಂಕರಿಸಲಾಯಿತು.

ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ವಿರುಪಣ್ಣ, ಪದಾಧಿಕಾರಿಗಳಾದ ಡಿ.ಆರ್.ಪಾಂಡುರಂಗ, ವಿ.ನಾಗರಾಜ, ವಿ.ಜಡೆಪ್ಪ, ವಿನಯಕುಮಾರ್, ಸದ್ಭಕ್ತರಾದ ಗೋವಿಂದ, ವೀರೇಶಪ್ಪ, ರಾಜಾಸಾಬ್ ಇತರರಿದ್ದರು.