ಮುಳಬಾಗಿಲು: ತಾಲೂಕಿನ ಮಾರಾಂಡಹಳ್ಳಿ ಡೇರಿ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಅವರ ಪುತ್ರಿ ಎಂ. ಎನ್.ಆಶಾ ಬಿಎಸ್ಸಿ ನರ್ಸಿಂಗ್ ಪದವಿಯಲ್ಲಿ ನ್ಯೂಟ್ರಿಷನ್ ಮತ್ತು ಡೈಟಿಕ್ಸ್ ವಿಷಯದಲ್ಲಿ 7ನೇ ರ್ಯಾಂಕ್ ಹಾಗೂ ನರ್ಸಿಂಗ್ ಫೌಂಡೇಷನ್ ವಿಷಯದಲ್ಲಿ 9ನೇ ರ್ಯಾಂಕ್ ಪಡೆದಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಸರ್ಕಾರಿ ಶುಶ್ರೂಷ ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಎಂ.ಎನ್.ಆಶಾಗೆ ಬೆಳ್ಳಿ ಪದಕ, ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸರ್ಕಾರದ ವೈದ್ಯಕಿಯ ಶಿಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಮೋಹಸಿನ್, ವೈದ್ಯಕಿಯ ಶಿಣ ನಿರ್ದೇಶನಾಲಯದ ನಿರ್ದೇಶಕಿ ಡಾ.ಸುಜಾತ ರಾಥೋಡ್, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಎಂ.ಡಿ.ಎನ್.ಎಂ.ನಾಗರಾಜ್, ಕರ್ನಾಟಕ ಶುಶ್ರೂಷ ಪರೀಾ ಪ್ರಾಧಿಕಾರ ಮಂಡಳಿಯ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ರಾಜೀವ್ಗಾಂಧಿ ಆರೋಗ್ಯ ವಿಾನಗಳ ವಿಶ್ವವಿದ್ಯಾಲಯದ ಡೀನ್ ಡಾ.ಪಿ.ಮಹೇಶ್, ಬಿ.ಎಂ.ಸಿ.ಆರ್.ಐ ನಿರ್ದೇಶಕ ಡಾ. ರಮೇಶ್ ಕೃಷ್ಣ, ಪ್ರಾಂಶುಪಾಲ ಶ್ರೀಕಾಂತ್ ಪುಲಾರಿ ಇದ್ದರು.