ಜಿಲ್ಲೆ

ಬಸವೇಶ್ವರ ದೇವಸ್ಥಾನಕ್ಕೆ ಕಳಸಾರೋಹಣ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಇಲ್ಲಿನ ವಿದ್ಯಾನಗರ ಸಿದ್ದೇಶ್ವರ ಪಾರ್ಕ್ ಬಳಿಯ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಬಸವ ಜಯಂತಿ ಹಾಗೂ ಕಳಸಾರೋಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೇವಸ್ಥಾನದ ಕಳಸವನ್ನು ಮೆರವಣಿಗೆ ಹಾಗೂ ಕುಂಭಮೇಳದೊಂದಿಗೆ ದೇವಸ್ಥಾನಕ್ಕೆ ಕರೆತರಲಾಯಿತು. ನಂತರ ಕಳಸಕ್ಕೆ ಅಭಿಷೇಕ ಮಾಡಿ, ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಹಾಗೂ ರಾಯಣಾಳದ ಸಂಸ್ಥಾನ ವಿರಕ್ಷಮಠದ ಶ್ರೀ ಅಭಿನವ ರೇವಣ ಸಿದ್ದೇಶ್ವರ ಸ್ವಾಮೀಜಿ ಅವರಿಂದ ಕಳಸಾರೋಹಣ ಮಾಡಿಸಲಾಯಿತು.

ಅತಿಥಿಯಾಗಿದ್ದ ಕಿಮ್್ಸ ನಿವೃತ್ತ ನಿರ್ದೇಶಕ ಡಾ. ಎಂ.ಜಿ. ಹಿರೇಮಠ ಮಾತನಾಡಿ, ಶ್ರೀ ಬಸವೇಶ್ವರ ದೇವಸ್ಥಾನಕ್ಕೆ 600 ವರ್ಷಗಳ ಇತಿಹಾಸವಿದೆ. ಇದು ಒಂದು ಪವಿತ್ರವಾದ ಸ್ಥಾನವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಸಾಂಸ್ಕೃತಿ ನಾಯಕ ಬಸವಣ್ಣನವರ ವಚನಗಳನ್ನು ಪಾಲಿಸಬೇಕು. ಪರರ ನೋವು ನಮಗೆ ಗೊತ್ತಾದರೆ ನಾವು ಮನುಷ್ಯರಾಗಿದ್ದೇವೆ ಎಂದು ಅರ್ಥ. ನಮ್ಮಲ್ಲಿ ಭಕ್ತಿ, ಸಮಾನತೆ, ವೈಚಾರಿಕತೆ, ಅನುಭಾವ, ಕಾಯಕ ದಾಸೋಹ, ವಿಚಾರಕ್ರಾಂತಿ, ಸುಜ್ಞಾನ, ಬೆಳಕು, ಪಾವಿತ್ರತೆಯು ಎಲ್ಲವನ್ನು ಪರಿಪೂರ್ಣತೆಯಿಂದ ಪಾಲಿಸಬೇಕು ಎಂದು ಸಲಹೆ ನೀಡಿದರು.

ಶ್ರೀ ಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ವಿ.ವಿ. ಕುರ್ತಕೋಟಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಡಿ. ಬಿ. ಬಾರಿಕಾಯಿ, ಗುರುಸಿದ್ದಪ್ಪ ಹಂಚಿನಮನಿ, ಸಂಭಾಜೀ ಕಲಾಲ ಉಪಸ್ಥಿತರಿದ್ದರು.

ಎಂ.ಎಸ್. ಪಾಟೀಲ, ರಮೇಶ ಭಡಂಕರ, ಶ್ರೀದೇವಿ ಸಂಸ್ಥಾನಮಠ, ಅರುಣಕುಮಾರ ಹಡಪದ, ನಾರಾಯಣ ಶಿಂಧೆ, ಬಸವರಾಜ ಹೊಸಪೇಟ, ಕೇಶವ ಕೊನಣ್ಣವರ, ಅಲ್ಲಾಭಕ್ಷ ನದಾಫ, ಎಸ್.ಬಿ. ತಿಗಡಿ, ಈಶ್ವರಪ್ಪ ಹೂಗಾರ, ಸಿದ್ದು ಹಂಡೇದ, ಆರತಿ ಶಿಂಧೆ, ಶಿವಾನಂದ ಸಾಧನಿ ಹಾಗೂ ಇತರರು ಭಾಗವಹಿಸಿದ್ದರು.

ಡಾ. ರಾಮೂ ಮೂಲಗಿ ಹಾಗೂ ಶೋಭಾ ಜಾಬಿನ ಪ್ರಾರ್ಥಿಸಿದರು. ಸುರೇಶ ಲಿಂಬಿಕಾಯಿ ಸ್ವಾಘತಿಸಿದರು. ಪ್ರೊ. ಎಸ್.ಆರ್. ಯಮ್ಮಿ ನಿರೂಪಿಸಿದರು.