ಚಿಕ್ಕೋಡಿ: ಆಶಾಡ ಏಕಾದಶಿ ನಮ್ಮ ಸಾಂಸ್ಕೃತಿ, ಪರಂಪರೆ ಮತ್ತು ಆಧ್ಯಾತ್ಮಿಕ ಸಂಪರ್ಕದ ಕೊಂಡಿಯಾಗಿದೆ ಎಂದು ಸಿಎಲ್‌ಇ ಸಿಬಿಎಸ್‌ಇ ಪ್ರಾಚಾರ್ಯೆ ಸ್ಮಿತಾ ಶಿಂಧೆ ಹೇಳಿದರು.
ಪಟ್ಟಣದ ಸಿಎಲ್‌ಇ ಸಂಸ್ಥೆಯ ಸಿಬಿಎಸ್‌ಇ ಶಾಲೆಯಲ್ಲಿ ಆಶಾಡ ಏಕಾದಶಿ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ದಿಂಡಿ ಉತ್ಸವ ಸಮಾರಂಭದಲ್ಲಿ ಮಾತನಾಡಿದರು. ಶಾಲೆಯ 160ಕ್ಕೂ ಹೆಚ್ಚು ಮಕ್ಕಳು ವಿಠ್ಠಲ, ರುಕ್ಮಿಣಿ ಹಾಗೂ ಪಾಂಡುರಂಗನ ವೇಷಭೂಷಣ ಧರಿಸಿ ಮಿಂಚಿದರು.
ಸಿಎಲ್‌ಇ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಎಸ್.ಎಸ್.ಮೆಟಗುಡ್ಡ, ಬಿ.ಡಿ.ರುಖಡೆ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಡಿ.ಎಸ್.ಕೋಳಿ ಇತರರಿದ್ದರು. ಎ.ಎನ್.ಮಡಿವಾಳ ಸ್ವಾಗತಿಸಿ, ನಿರೂಪಿಸಿದರು.