ಕವಿತಾಳ: ಸಮೀಪದ ಸುಕ್ಷೇತ್ರ ವಟಗಲ್‌ನಲ್ಲಿ ಬಸವೇಶ್ವರ ದೇವರಿಗೆ ಗರ್ಭಗುಡಿ ಹಾಗೂ ಶಿಲಾ ಮಂಟಪ ನಿರ್ಮಾಣ ಕಾಮಗಾರಿಗೆ ಯದ್ದಲದೊಡ್ಡಿಯ ಮಹಾಲಿಂಗ ಶ್ರೀಗಳು ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶ್ರೀಗಳು, ವಟಗಲ್ ಬಸವೇಶ್ವರ ದೇವರು ಅಪಾರ ಭಕ್ತರನ್ನು ಹೊಂದಿದ್ದು, ಅವರ ಅಭಿಲಾಷೆಯಂತೆ ದೇವಸ್ಥಾನ ಸಮಿತಿ ಗರ್ಭಗುಡಿ ಮತ್ತು ಶಿಲಾಮಂಟಪ ನಿರ್ಮಿಸಲು ಮುಂದಾಗಿದೆ ಎಂದರು.
ವಟಗಲ್ ಬಸವೇಶ್ವರ ದೇವರು ಹುಣಸೆಮರದಲ್ಲಿ ಉದ್ಭವವಾಗಿದ್ದು, ಬಸವೇಶ್ವರ ಗರ್ಭಗುಡಿ ಮತ್ತು ಶಿಲಾ ಮಂಟಪವನ್ನು ಕಟ್ಟುವಾಗ ಭಕ್ತರ ತೀರ್ಮಾನದಂತೆ ಮರ ಉಳಿಸಲು ಪ್ರಯತ್ನಿಸಬೇಕು ಎಂದು ಇತರ ಶ್ರೀಗಳು ಹೇಳಿದರು.
ಸಂತೆಕೆಲ್ಲೂರು ಮಹಾಂತೇಶ ಶಿವಾಚಾರ್ಯರು, ಕರೆಗುಡ್ಡ ಮಹಾಂತಲಿಂಗ ಸ್ವಾಮೀಜಿ, ಮಲ್ಲದಗುಡ್ಡ ಅಯ್ಯಪ್ಪಸ್ವಾಮಿ, ಅಮೀನಗಡದ ದೇವಯ್ಯ ತಾತ, ನಿರಂಜನಸ್ವಾಮಿ ಹಿರೇಮಠ, ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಬಲವಂತರಾಯಗೌಡ, ಶಿವಕುಮಾರಗೌಡ, ವೆಂಕನಗೌಡ ಮಾಪಾ, ಮಲ್ಲನಗೌಡ ಮಾಪಾ, ಸುಧಾಕರ ಪೂಜಾರಿ, ಯಲ್ಲಪ್ಪ ಪೂಜಾರಿ, ಭೀಮಣ್ಣ ನಾಯಕ, ಮೌನೇಶ ಆನ್ವರಿ, ಬಸವರಾಜ ಚಿಲ್ಕರಾಗಿ, ಮಲ್ಲರಡ್ಡೆಪ್ಪ, ಬಸನಗೌಡ ಸಿಂಧನೂರು, ಶಿವನಗೌಡ ಕೈರವಾಡಗಿ ಇತರರಿದ್ದರು.