ಜಿಲ್ಲೆ

ಮಣ್ಣಿನಿಂದ ದೂರವಾದಷ್ಟು ನೆಮ್ಮದಿಯಿಂದ ದೂರ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಮೂವತ್ತು ಸಾವಿರ ವರ್ಷಗಳಿಂದೀಚೆಗೆ ನಾಗರಿಕತೆ ಆರಂಭವಾಗಿದ್ದು, ಮುಂದೆ ಅದು ಸಾವಕಾಶವಾಗಿ ವಿಕಾಸವಾಗತೊಡಗಿತು. ಬೇಟೆಗಾರ ಜನರು ಇದ್ದ ತಾವಿದ್ದ ಸ್ಥಳ ಬಿಟ್ಟು ಬೇರೆಡೆಗೆ ಹೋಗುವುದು ಆರಂಭವಾಯಿತು. ಈ ಮೂಲಕ ಸಾವಕಾಶವಾಗಿ ಪರಿಸರ ನಾಶ ಆರಂಭವಾಯಿತು ಎಂದು ಪರಿಸರವಾದಿ ಡಾ. ಸಂಜೀವ ಕುಲಕಣಿರ್ ಅಭಿಪ್ರಾಯಪಟ್ಟರು.
ನಗರದ ಅನ್ವೇಷಣ ಕೂಟವು ಇಲ್ಲಿನ ಸಾಧನಕೇರಿಯ ಚೈತ್ರದ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ "ಮಣ್ಣಿನಿಂದ ದೂರ ಆರೋಗ್ಯದಿಂದ ದೂರ' ಕುರಿತು ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ. ಪ್ರಕಾಶ ಭಟ್ಟ ಮಾತನಾಡಿ, ಯೋಗ ಮತ್ತು ಸಾಂಖ್ಯ ಬುದ್ದಿಯ ನಡುವಿನ ಅಂತರವನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ ಎಂಬ ಆಚಾರ್ಯ ವಿನೋಬಾ ಅವರ ವಿಚಾರ ಇಂದು ಅತ್ಯವಶ್ಯಕ ಸಂಗತಿ. ಸರಳ ಸುಖ ಜೀವನ ಕಾಣುವ ರೀತಿ ಮತ್ತು ಸಾಧನೆಗಳನ್ನು ನಾವೆಲ್ಲರೂ ಇಂದು ಸಾಧಿಸಿ ಅಳವಡಿಸಿಕೊಳ್ಳಬೇಕು ಎಂದರು.
ಅನ್ವೇಷಣ ಕೂಟದ ಅಧ್ಯಕ್ಷ ನರಸಿಂಹ ಪರಾಂಜಪೆ, ವೆಂಕಟೇಶ ದೇಸಾಯಿ, ಅನಿಲ ಕಾಖಂಡಕಿ, ಪ್ರೊ. ದುಷ್ಯಂತ ನಾಡಗೌಡ, ಅನಂತ ಸಿದ್ದೇಶ್ವರ, ಶ್ರೀಧರ ಗಾಂವಕರ, ಅನಂತ ಥಿಟೆ, ಪ್ರೊ.ಸಿ.ಆರ್​. ಜೋಶಿ, ಶ್ರೀನಿವಾಸ ವಾಡಪ್ಪಿ, ರಮೇಶ ನಾಡಗೀರ, ರಾಜೀವ ಪಾಟೀಲ ಕುಲಕಣಿರ್, ಆರ್​.ಎಂ. ದೊಡ್ಡಮನಿ, ಡಾ. ಸಂತೋಷ ಕುಲಕಣಿರ್, ಮಹಾಬಳೇಶ್ವರ ಸಿಂದಗಿ, ಬಿ.ಐ. ಈಳಿಗೇರ, ಎಂ.ಬಿ. ಸದಾನಂದ, ಡಾ. ಶಾಲಿನಿ ರುನಾಥ, ಸರೋಜಾ ಕುಲಕಣಿರ್, ಸೀಮಾ ಪರಾಂಜಪೆ, ಇತರರು ಇದ್ದರು.