ಬಳ್ಳಾರಿ ನಗರದ ಮರಿಸ್ವಾಮಿ ಮಠದಲ್ಲಿ ಈಚೆಗೆ ನಡೆದ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಳ್ಳಾರಿ ತಾಲೂಕಿನ ಯೋಜನಾಧಿಕಾರಿ ವೆಂಕಟೇಶ್ ಪಟೇಗರ ಅವರು ಉದ್ಘಾಟಿಸಿದರು. 
ಜಿಲ್ಲೆ

ಆರ್ಥಿಕ ನೆರವು ಪಡೆದು ಉದ್ಯೋಗಿಗಳಾಗಿ

Bellari - Heera Nayak

ಬಳ್ಳಾರಿ: ಮಹಿಳೆಯರು ಆರ್ಥಿಕ ನೆರವು ಪಡೆದು ಉದ್ಯೋಗಿಗಳಾಗಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಳ್ಳಾರಿ ತಾಲೂಕಿನ ಯೋಜನಾಧಿಕಾರಿ ವೆಂಕಟೇಶ್ ಪಟೇಗರ ಹೇಳಿದರು.

ನಗರದ ಮರಿಸ್ವಾಮಿ ಮಠದಲ್ಲಿ ಈಚೆಗೆ ನಡೆದ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾವಲಂಬಿ ಜೀವನ ಮಾಡಲು ಆರ್ಥಿಕವಾಗಿ ಸಬಲತೆ ಸಾಧಿಸಬೇಕಿದೆ. ಅದಕ್ಕಾಗಿ ಸ್ವ ಉದ್ಯೋಗ ಮಾಡಬೇಕು. ಆ ಮೂಲಕ ಯುವ ಜನತೆಗೆ ಉದ್ಯೋಗ ಸೃಷ್ಠಿ ಮಾಡಬೇಕಿದೆ ಎಂದರು.

ಪಾಲಿಕೆ ಸದಸ್ಯೆ ಕೆ.ಎಂ.ಚೇತನಾ, ಕಾವ್ಯಾ ಆರ್, ರುಡ್‌ಶೆಡ್ ಸಂಸ್ಥೆ ಉಪನ್ಯಾಸಕರಾದ ಜಡೆಪ್ಪ ಜಿ, ಅಪರ್ಣಾ, ವಲಯದ ಮೇಲ್ವಿಚಾರಕಿ ರತ್ನಾ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಆಶಾ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.