ಯರಗಟ್ಟಿ ಮಹಾಂತ ದುರದುಂಡೇಶ್ವರ ಮಠದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಉದ್ಘಾಟನೆ ಜರುಗಿತು. ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಪ್ರಮೋದ ಬಡಿಗೇರ, ಮಲ್ಲಿಕಾರ್ಜುನ ಕೆ.ಆರ್, ಲಕ್ಷ್ಮಣ ಯಮಕನಮರಡಿ ಇತರರಿದ್ದರು. 
ಜಿಲ್ಲೆ

ಛಾಯಾಗ್ರಾಹಕ ವೃತ್ತಿ ತಪಸ್ಸಿದ್ದಂತೆ

ರಾಘವೇಂದ್ರಗೌಡ ಭೀ ಪಾಟೀಲ್

ಯರಗಟ್ಟಿ: ಛಾಯಾಗ್ರಾಹಕ ವೃತ್ತಿಗೆ 175 ವರ್ಷದ ಇತಿಹಾಸವಿದೆ. ಇಂದು ಕ್ಯಾಮರಾ ತಂತ್ರಜ್ಞಾನ ಸಾಕಷ್ಟು ಸುಧಾರಣೆಗೊಂಡಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಪಟ್ಟಣದ ಮಹಾಂತ ದುರದುಂಡೇಶ್ವರ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಛಾಯಾಗ್ರಾಹಕರ ಸಂಘದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಕ್ಯಾಮರಾ ಉಪಯೋಗಿಸುವ ಎಲ್ಲರೂ ಛಾಯಾಗ್ರಾಹಕರಾಗಲು ಸಾಧ್ಯವಿಲ್ಲ. ಇದೊಂದು ತಪಸ್ಸಾಗಿದ್ದು, ಶ್ರದ್ಧೆ, ನಿಷ್ಠೆಯಿಂದ ಕೆಲಸ ಮಾಡಿದರೆ ಸಾಧನೆ ಮಾಡಬಹುದು ಎಂದರು.

ಸಾನ್ನಿಧ್ಯ ವಹಿಸಿದ್ಧ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ಮಾತನಾಡಿ, ಸಂಘಟನೆ ಇಲ್ಲದೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಾಧ್ಯವಿಲ್ಲ. ಸಂಘಟನೆ ಅವಶ್ಯಕತೆ ಎಲ್ಲರಿಗೂ ಇದೆ ಎಂದರು.
ಛಾಯಾಗ್ರಾಹಕರ ಅಸೋಸಿಯೇಶನ್ ತಾಲೂಕು ಘಟಕದ ಅಧ್ಯಕ್ಷ ಪ್ರಮೋದ ಬಡಿಗೇರ, ಮಲ್ಲಿಕಾರ್ಜುನ ಕೆ.ಆರ್, ಲಕ್ಷ್ಮಣ ಯಮಕನಮರಡಿ, ಬಸವರಾಜ ರಾಮಣ್ಣವರ, ಅಶೋಕ ಹಾದಿಮನಿ, ಭಾಸ್ಕರ ಹಿರೇಮೇತ್ರಿ, ಸುರೇಶ ಭಜಂತ್ರಿ, ನಿಖಿಲ ಪಾಟೀಲ, ಕೀರಪ್ಪ ಹದ್ದನವರ, ಹನುಮಂತ ಹಾರುಗೊಪ್ಪ, ಸಲೀಂಬೇಗ್ ಜಮಾದಾರ, ಶಂಕರ ಇಟ್ನಾಳ, ವಿಕ್ರಮ ಇಂಗಳೆ, ಚನ್ನಪ್ಪ ಪಣದಿ, ಮಹಾಂತೇಶ ಡವಳೇಶ್ವರ, ಪ್ರಜ್ವಲ ಮುದ್ದಾಗಿ, ರಮೇಶ ದಳವಾಯಿ ಇತರರಿದ್ದರು.