ಅಥಣಿ ಪಟ್ಟಣದಲ್ಲಿ ಸಿದ್ಧಾಂತ ಆರ್ಯುವೇದ ಮಹಾವಿದ್ಯಾಲಯವನ್ನು ಶಾಸಕ ಲಕ್ಷ್ಮಣ ಸವದಿ ಸೋಮವಾರ ಉದ್ಘಾಟಿಸಿದರು. ವೇಮನಾನಂದ ಸ್ವಾಮೀಜಿ, ಶಿವಬಸವ ಸ್ವಾಮೀಜಿ, ಮರುಳಸಿದ್ದ ಸ್ವಾಮೀಜಿ, ಆನಂದ ಕಿರಶ್ಯಾಳ ಇತರರಿದ್ದರು. 
ಜಿಲ್ಲೆ

ಆರ್ಯುವೇದ ವೈದ್ಯರಿಗಿದೆ ಉತ್ತಮ ಭವಿಷ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಅಥಣಿ: ಅಲೋಪತಿಗಿಂತ ಆರ್ಯುವೇದಕ್ಕೆ ಹೆಚ್ಚಿನ ಮಹತ್ವವಿದೆ. ಮುಂದಿನ ದಿನಗಳಲ್ಲಿ ಆರ್ಯುವೇದ ವೈದ್ಯರಿಗೆ ಉತ್ತಮ ಭವಿಷ್ಯವಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯಲ್ಲಿ ಸಿದ್ಧಾಂತ ಆರ್ಯುವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಇಂತಹ ಮಹಾವಿದ್ಯಾಲಯದ ಕೊರತೆ ಇತ್ತು ಅದು ಈಗ ನೀಗಿದೆ. ಈ ಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಅನುಕೂಲವಾಗಿದ್ದು, ಇದೊಂದು ಮಾದರಿ ಕಾಲೇಜು ಆಗಿ ರಾಜ್ಯಕ್ಕೆ ಉತ್ತಮ ಹೆಸರು ತರವಂತಾಗಲಿದೆ ಎಂದು ಹಾರೈಸಿದರು.

ಸಾನ್ನಿಧ್ಯ ವಹಿಸಿದ್ದ ಹೇಮ-ವೇಮ ಪೀಠದ ವೇಮನಾನಂದ ಸ್ವಾಮೀಜಿ, ಗಚ್ಚಿನಮಠದ ಶಿವಬಸವ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಥೆಯ ಸಂಸ್ಥಾಪಕ ಡಾ.ಆನಂದ ಕಿರಶ್ಯಾಳ ಮಾತನಾಡಿದರು. ಡಾ.ಎಸ್.ಕೆ.ಬನ್ನಿಗೊಳ, ಡಾ.ಸಂತೋಷ ಯಡಹಳ್ಳಿ, ಡಾ.ಮೊಹನ ಬಿರಾದಾರ, ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ, ಡಾ.ಸತೀಶ ಮುಗ್ಗನವರ, ಡಾ.ಉಮಾ ಕಿರಶ್ಯಾಳ, ಡಾ.ಸಿ.ಎ.ಸಂಕ್ರಟ್ಟಿ, ಡಾ.ಸ್ಮಿತಾ ಚೌಗಲಾ, ಎ.ಎಸ್.ಹುಚಗೌಡರ, ನಿಂಗಪ್ಪ ಕೊಕಲೆ, ಚಂದ್ರಕಾಂತ ಇಮ್ಮಡಿ ಇತರರು ಇದ್ದರು.