ಗದಗ: ವಿದ್ಯಾರ್ಥಿಗಳು ಸರ್ವತೋಮುಖ ಅಭಿವೃದ್ಧಿಯಾಗಲು ದೈಹಿಕವಾಗಿ, ಮಾನಸಿಕವಾಗಿ, ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸದೃಢರಾಗಿರಬೇಕಾಗುತ್ತದೆ. ಅದಕ್ಕಾಗಿ ಸತತ ಅಧ್ಯಯನ, ಪರಿಶ್ರಮ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಅತಿಯಾದ ಮೊಬೈಲ್ ಗೀಳು ಬಿಡಬೇಕು ಎಂದು ಶಿರಹಟ್ಟಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಬಿ.ಜಿ. ಗಿರಿತಿಮ್ಮಣ್ಣವರ ಹೇಳಿದರು.
ಅವರು ಸ್ಥಳೀಯ ಐ.ಎಮ್.ಎಸ್. ಎಜ್ಯೂಕೇಶನ ಟ್ರಸ್ಟ್ನವರು ನಡೆಸುತ್ತಿರುವ ಆರ್ಯಭಟ ಪಿ.ಯು. ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷಿಕ ದಿನಾಚರಣೆ ಹಾಗೂ ಪಾರಿತೋಷಕ ವಿತರಣೆ ಮತ್ತು ಸ್ವಾಮಿ ವಿವೇಕಾನಂದರ ಜಯಂತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪಾರಿತೋಷಕ ಪಡೆದುಕೊಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿ ಎಲ್ಲ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರು ನಿಮಗೆ ನೀಡುತ್ತಿರುವ ಜ್ಞಾನವನ್ನು ಪರಿಪೂರ್ಣ ಬಳಸಿ ಉತ್ತಮ ಅಂಕಗಳಿಸಿ ಕಾಲೇಜಿಗೆ, ಜಿಲ್ಲೆಗೆ ಹೆಸರು ತರಬೇಕು ಎಂದರು. ವಿಶೇಷವಾಗಿ ನೀಟ/ಸಿಇಟಿ/ಜೆಇಇ ತರಬೇತಿ ಈ ಕಾಲೇಜಿನಲ್ಲಿ ಇರುವುದು ವಿದ್ಯಾರ್ಥಿಗಳ ಭಾಗ್ಯ ಎಂದು ನುಡಿದರು.
ಮಾನ್ಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ವೈಶಾಲಿ ಎಮ್.ಎಲ್. ತುರ್ತು ಕರ್ತವ್ಯ ನಿಮಿತ್ಯ ಕಾರ್ಯಕ್ರಮಕ್ಕೆ ತಾವಿದ್ದಲ್ಲಿಂದಲೇ ಶುಭ ಕೋರಿದರು. ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರಾದ ಡಾ. ಕೃಷ್ಣಪ್ಪ ಪಿ. ವಾರ್ಷಿಕ ದಿನಾಚರಣೆಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಐ.ಎಮ್.ಎಸ್. ಎಜ್ಯೂಕೇಶನ್ ಟ್ರಸ್ಟಿನ ಚೇರಮನ್ ಶ್ರೀಮತಿ ಲತಾ ಪಟ್ಟಣಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಕೇವಲ ಆರ್ಥಿಕ ಲಾಭಗಳನ್ನು ಪರಿಗಣಿಸದೇ ಸಾಮಾಜಿಕ ಲಾಭ ಮತ್ತು ನೈತಿಕ ಲಾಭಗಳನ್ನು ಗಣನೆಗೆ ತೆಗೆದುಕೊಂಡು ಜೀವನ ನಡೆಸಿದರೆ ದೇಶ ಅಭಿವೃದ್ಧಿಗೆ ಪೂರಕವಾಗುವುದು ಎಂದು ನುಡಿದರು.
ಐ.ಪಿ.ಇ.ಟಿ ಬೆಂಗಳೂರು ಸಂಸ್ಥೆಯ ಚೇರಮನ್ ಶ್ರೀ ಶ್ರೀ ಶರಣ ಎಸ್. ರಡ್ಡೇರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಐ.ಪಿ.ಇ.ಟಿ. ಬೆಂಗಳೂರು ಸಂಸ್ಥೆಯ ಖಜಾಂಚಿ ಶ್ರೀಮತಿ ಅಮೃತ ಹಸರಡ್ಡಿ ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಮಾತುಗಳನ್ನು ಆಡಿ ೨೦೨೨-೨೩ ನೇ ಸಾಲಿನಲ್ಲಿ ಆರ್ಯಭಟ ಪಿಯು ಕಾಲೇಜಿನಲ್ಲಿ ಕಲಿತು ಗದಗ ಜಿಲ್ಲೆಗೆ ನಾಲ್ಕನೇ ರ‍್ಯಾಂಕ್ ಪಡೆದ ವಿದ್ಯಾರ್ಥಿ ಆದಿತ್ಯ ನಾಸಿ ಗೆ ವಿಶೇಷ ಬಹುಮಾನ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯರಾದ ಶ್ರೀ ಪ್ರಶಾಂತಕುಮಾರ ದೊಡ್ಡಮನಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಪಿಯುಸಿ ಹಂತ ಟರ್ನಿಂಗ್ ಪಾಯಿಂಟ್ ಆಗಿದ್ದು ಇದನ್ನು ಜಾಗರೂಕತೆಯಿಂದ ನಿರ್ವಹಿಸಿದರೆ ನಿಮ್ಮ ಭವಿಷ್ಯ ಉಜ್ವಲವಾಗಿರುತ್ತದೆ ಎಂದರು. ಅದಕ್ಕೆ ಇರುವ ಅಸ್ತç ಎಂದರೆ ನಿರಂತರ ಅಭ್ಯಾಸ ಮತ್ತು ಪ್ರಾಮಾಣಿಕತೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಐ.ಎಮ್.ಎಸ್. ಎಜ್ಯೂಕೇಶನ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಮಾರುತಿ ಎಸ್.ಕೆ. ಎಡ್ಮಿನಿಸ್ಟೆçÃಟರ್ ಶ್ರೀ ಸಂಗಮೇಶ ಸಿ.ಕೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಎಲ್ಲ ಉಪನ್ಯಾಸಕರು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಮತಾ ಪವಾರ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಪ್ರೊ. ಬಸಯ್ಯ ಸ್ವಾಗತಿಸಿ, ಪರಿಚಯಿಸಿದರು. ಪ್ರೊ. ಅಗಸಿಮನಿ ವಾರ್ಷಿಕ ವರದಿ ವಾಚನ ಮಾಡಿದರು. ಪ್ರೊ. ಮಲ್ಲಪ್ಪ ವಂದಿಸಿದರು. ಕು. ಕಾವ್ಯ ಹಾಗೂ ಕು. ಭಾವನಾ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಾಲಿಮಠ ಪಾರಿತೋಷಕ ವಿತರಣೆ ಕಾರ್ಯಕ್ರಮವನ್ನು ನಿರೂಪಿಸಿದರು. ನಂತರ ವಿದ್ಯಾರ್ಥಿಗಳು ಅದ್ಭುತ ಮನೋರಂಜನ ಕಾರ್ಯಕ್ರಮಗಳಾದ ಹಾಡುಗಳು, ಕುಣಿತಗಳು, ಶಹರಿಗಳು, ರೀಲ್ಸ್ಗಳನ್ನು ಅಚ್ಚುಕಟ್ಟಾಗಿ ಪ್ರದರ್ಶಿಸಿ, ಕೇಕೆ ಶಿಳ್ಳೆಗಳಿಂದ ನಕ್ಕು ನಲಿದು ಸಂಭ್ರಮಿಸಿದರು. ವಿದ್ಯಾರ್ಥಿಗಳ ಪಾಲಕರೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಮ್ಮ ತಮ್ಮ ಮಕ್ಕಳ ಕಲೆ-ಪ್ರದರ್ಶನ-ಪಡೆದ ಬಹುಮಾನ ಪಾರಿತೋಷಕಗಳನ್ನು ಕಂಡು ಹೆಮ್ಮೆ ಪಟ್ಟರು.