ಲೇಖಕಿ ಅರುಂಧತಿ ರಾಯ್ ಮತ್ತು ಮಾಜಿ ಪ್ರಾಧ್ಯಪಕ ಶೇಖ್ ಶೌಖತ್ ಹುಸೇನ್ ವಿರುದ್ಧ ದಾಖಲಿಸಿರುವ ಪ್ರಕರಣ ಕೈಬಿಡಲು ಒತ್ತಾಯಿಸಿ ಬಂಟ್ವಾಳ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. 
ಜಿಲ್ಲೆ

ಅರುಂಧತಿ ರಾಯ್ ವಿರುದ್ಧದ ಪ್ರಕರಣ ಕೈಬಿಡಲು ಮನವಿ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಲೇಖಕಿ ಅರುಂಧತಿ ರಾಯ್ ಮತ್ತು ಮಾಜಿ ಪ್ರಾಧ್ಯಾಪಕ ಶೇಖ್ ಶೌಖತ್ ಹುಸೇನ್ ವಿರುದ್ಧದ ಪ್ರಕರಣ ಕೈಬಿಡುವಂತೆ ಸಿಪಿಐಎಂಎಲ್ ಲಿಬರೇಶನ್ ದ.ಕ ಜಿಲ್ಲಾ ಸಮಿತಿಯಿಂದ ಬಂಟ್ವಾಳ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು.

ಭಯೋತ್ಪಾದನಾ-ವಿರೋಧಿ ಪ್ರಕರಣದಲ್ಲಿ ಮಾನವ ಹಕ್ಕುಗಳ ಹೋರಾಟಗಾರರನ್ನು ದುರುದ್ದೇಶಪೂರ್ವಕವಾಗಿ ತಳುಕುಹಾಕಿ ಆರುಂಧತಿ ರಾಯ್ ಮತ್ತಿತರರ ವಿರುದ್ಧ ಸುಳ್ಳು ಕೇಸು ದಾಖಲಿಸಿರುವುದನ್ನು ಸಿಪಿಐಎಂಎಲ್ ಲಿಬರೇಶನ್ ದ.ಕ ಜಿಲ್ಲಾ ಸಮಿತಿ ಖಂಡಿಸುತ್ತದೆ. ಆರುಂಧತಿ ರಾಯ್ ಅವರು ಸಂವಿಧಾನ ವಿರೋಧಿ, ಜನವಿರೋಧಿ ನೀತಿಗಳು, ಅನ್ಯಾಯಗಳ ವಿರುದ್ಧ ನಿರಂತರ ಧ್ವನಿ ಎತ್ತುತ್ತಾ ಬಂದವರು ಎಂದು ಮನವಿಯಲ್ಲಿ ತಿಳಿಸಿದೆ.

ನಿಯೋಗದಲ್ಲಿ ಸಿಪಿಐಎಂಎಲ್ ಲಿಬರೇಶನ್ ಜಿಲ್ಲಾ ಕಾರ್ಯದರ್ಶಿ ರಾಮಣ್ಣ ವಿಟ್ಲ, ಜಿಲ್ಲಾ ಸಮಿತಿ ಸದಸ್ಯರಾದ ಸಜೇಶ್ ವಿಟ್ಲ, ಮುಖಂಡರಾದ ರಾಜಾ ಚೆಂಡ್ತಿಮಾರ್, ಅಪ್ಪು ನಾಯ್ಕ, ಸರಸ್ವತಿ ಕಡೇಶಿವಾಲಯ, ತುಳಸೀದಾಸ್ ವಿಟ್ಲ ಉಪಸ್ಥಿತರಿದ್ದರು.