ಜಿಲ್ಲೆ

ಪಕ್ಷ ಸಂಘಟನೆಗೂ ಅರುಣ ಟಾನಿಕ್​

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ವಿಭಿನ್ನ ಕಾರ್ಯಕ್ರಮ, ವಿಶಿಷ್ಟ ಚಟುವಟಿಕೆಗಳ ಮೂಲಕ ಪಕ್ಷದ ಕಾರ್ಯ ಕರ್ತರು ಹೆಮ್ಮೆಯಿಂದ ತಲೆ ಎತ್ತಿ ಓಡಾಡುವಂತಹ ಟಾನಿಕ್​ ಅನ್ನು ಸಂಟನೆಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ನೀಡಿದ್ದಾರೆ. ಸರ್ಕಾರದ ಗೊಂದಲ, ಕೆಲವರ ವಿಭಿನ್ನ ಹೇಳಿಕೆಗಳ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದಕ್ಕೆ ಅವಕಾಶ ನೀಡಬಾರದು. ನಿಮ್ಮ ಬಿಡುವಿಲ್ಲದ ಶ್ರಮ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ವಿಶ್ವಾಸ ಮೂಡಿಸಬೇಕು ಎಂದು ರಾಜ್ಯದ ನಾಯಕರಿಗೆ ಸೂಚಿಸಿದ್ದಾರೆ.

ಅಪನಂಬಿಕೆ, ಗೊಂದಲ ಹೋಗಲಾಡಿಸಲೆಂದು ರಾಜ್ಯಕ್ಕೆ ಬಂದಿರುವ ಅವರು, ಮೂರನೇ ದಿನವಾದ ಶುಕ್ರವಾರವೂ ಪಕ್ಷದ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಹಾಗೂ ರಾಜ್ಯ ಕೋರ್​ ಕಮಿಟಿ ಸಭೆಯ ಚರ್ಚೆ ವೇಳೆ ಸ್ಪಷ್ಟ ಮಾರ್ಗಸೂಚಿ ಹಾಕಿಕೊಟ್ಟಿದ್ದಾರೆ.

ಯೋಜನೆಗಳಿಗೆ ಹೆಚ್ಚಿನ ಪ್ರಚಾರ: ಯೋಜನೆಗಳ ಲಾಭ ಅರ್ಹರಿಗೆ ಸಕಾಲಕ್ಕೆ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರಿಗೆ ಒಪ್ಪಿಸಿದರೆ ಖುಷಿಯಿಂದ ನಿಭಾಯಿಸುತ್ತಾರೆ. ಇದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳಿಗೆ ಹೆಚ್ಚಿನ ಪ್ರಚಾರ ದೊರೆಯಲಿದೆ. ಅಲ್ಲದೆ, ಅರ್ಹರು ಈ ಕಾರ್ಯಕ್ರಮಗಳ ಲಾಭ ಪಡೆದುಕೊಳ್ಳುವುದಕ್ಕೆ ನೆರವಾಗಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಗ್ಗೆ ಜನಪ್ರಿಯತೆ ಹೆಚ್ಚಲಿದೆ. ಸರ್ಕಾರ ಮತ್ತು ಪಕ್ಷ ಒಟ್ಟಿಗೆ ಸಾಗಬೇಕೆಂಬ ವರಿಷ್ಠರ ಆಶಯವೂ ಈಡೇರುತ್ತದೆ ಎಂದೂ ಅರುಣ್​ ಸಿಂಗ್​ ಸುಲಭೋಪಾಯ ನೀಡಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಳೆದ 7 ವರ್ಷಗಳ ಅವಧಿಯಲ್ಲಿ ಜಾರಿಗೊಳಿಸಿದ ಪ್ರಮುಖ ಯೋಜನೆಗಳ ಬಗ್ಗೆ ಪ್ರಾಜ್ಞರು ಮತ್ತು ಅಭಿಪ್ರಾಯ ರೂಪಿಸುವವರ ಜತೆಗೆ ಚರ್ಚಿಸಿ, ಮನವರಿಕೆ ಮಾಡಿಕೊಡುವುದು. ಜನಸಂದ ಸಂಸ್ಥಾಪಕ ಡಾ.ಶ್ಯಾಮ್​ಪ್ರಸಾದ್​ ಮುಖರ್ಜಿ ಬಲಿದಾನ ದಿನ ಹಾಗೂ ಜನ್ಮದಿನದಂದು ಪಕ್ಷದ ತತ್ವ&ಸಿದ್ಧಾಂತಗಳ ಕುರಿತು ವಿಚಾರ ಸಂಕಿರಣ, ವೆಬೆಕ್ಸ್​ ಸಭೆಗಳ ಮೂಲಕ ಕಾರ್ಯಕರ್ತರಿಗೆ ಮಾಹಿತಿ ನೀಡಬೇಕೆಂದು ಅರುಣ್​ ಸಿಂಗ್​ ಸಲಹೆ ಕೊಟ್ಟಿದ್ದಾರೆ.

ಆತ್ಮವಿಶ್ವಾಸ ತುಂಬಲು ಪಣ: ಜೂ.21ರಿಂದ ಜು.31ರವರೆಗೆ ನಿರಂತರ ಚಟುವಟಿಕೆಗಳು ಮೂಲಕ ಕಾರ್ಯಕರ್ತರಿಂದ ಮುಖಂಡರವರೆಗೆ ಆತ್ಮವಿಶ್ವಾಸ, ಚೈತನ್ಯ ತುಂಬಲು ಸಭೆಗಳಲ್ಲಿ ಪಣತೊಟ್ಟಿದ್ದು, ಕೇಂದ್ರದ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರಧಾನಿ ಮೋದಿ ವರ್ಚಸ್ಸು ಹೆಚ್ಚಿಸಲು ಒಮ್ಮತದ ರ್ನಿಣಯ ತೆಗೆದುಕೊಂಡಿದೆ.

ಪದ ಆಂತರಿಕ ಭಿನ್ನಮತ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಇದು ಚುನಾವಣೆ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ತಳ ಮಟ್ಟದಲ್ಲಿ ಪ ಸಂಟನೆಯಲ್ಲಿ ಆತ್ಮವಿಶ್ವಾಸ ತುಂಬಿ, ಹುರುಪು ಹೆಚ್ಚಿಸುವ ಕಾರ್ಯತಂತ್ರ ರೂಪಿಸಲು ತೀರ್ಮಾನಿಸಿದೆ. ಸರ್ಕಾರದಲ್ಲಿನ ಗೊಂದಲ, ಸರ್ಕಾರ ಮತ್ತು ಪಕ್ಷದ ನಡುವಿನ ಸಂವಹನ ಮತ್ತು ಸಂಪರ್ಕ ಕೊರತೆ ನಿವಾರಿಸಲೆಂದು ಅರುಣ್​ ಸಿಂಗ್​ ಕಳೆದ ಮೂರು ದಿನಗಳಿಂದ ಬೀಡು ಬಿಟ್ಟಿದ್ದು, ಬಿಡುವಿಲ್ಲದ ಚರ್ಚೆ ಮತ್ತು ಅಭಿಪ್ರಾಯ ಸಂಗ್ರಹಿಸುವ ಮೂಲಕ ಯಾರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದಾರೆ. ಕರೊನಾ ಸಂಕಷ್ಟ ಸಂದರ್ಭ ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಪಕ್ಷದ ಸ್ಪಂದನೆ ಹೇಗಿರಬೇಕು ಎಂಬ ಬಗ್ಗೆ ಸಿಂಗ್​ ಕೆಲ ಸಲಹೆ ಸೂಚನೆ ನೀಡಿದರು ಎಂದು ಮೂಲಗಳು ಮಾಹಿತಿ ನೀಡಿವೆ.

ಬೆಲ್ಲದಗೆ ಸಿಗದ ಸಿಹಿ

ನಾಯಕತ್ವದ ವಿರುದ್ಧ ಪರೋಕ್ಷ ಅಪಸ್ವರ, ೋನ್​ ಕದ್ದಾಲಿಕೆ ಬಗ್ಗೆ ದೊಡ್ಡ ಧ್ವನಿ ಎತ್ತಿದ್ದ ಶಾಸಕ ಅರವಿಂದ ಬೆಲ್ಲದ ಅವರಿಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಭೇಟಿ ಪ್ರಯತ್ನ ಸಾಧ್ಯವಾಗಲಿಲ್ಲ. ಶಾಸಕರ ಅಭಿಪ್ರಾಯ ಸಂಗ್ರಹದ ವೇಳೆ ಕಾಲಾವಕಾಶ ಕೇಳಿದ್ದರು. ಆದರೆ ದೆಹಲಿಯಲ್ಲಿ ಕೆಲವು ದಿನಗಳ ಹಿಂದಷ್ಟೇ ಭೇಟಿಯಾದ ಕಾರಣ ಪುನ@ ಭೇಟಿಗೆ ಸಿಂಗ್​ ಕಾಲಾವಕಾಶ ನೀಡಲಿಲ್ಲ. ಪಕ್ಷದ ರಾಜ್ಯ ಕಚೇರಿಯಲ್ಲಿ ಅರುಣ್​ ಸಿಂಗ್​ ವಿವಿಧ ಸಭೆಗಳಲ್ಲಿ ಶುಕ್ರವಾರ ಭಾಗವಹಿಸಿದ್ದರು. ಇದೇ ವೇಳೆ ಕಚೇರಿಗೆ ದಿಢೀರ್​ ಎಂಟ್ರಿ ಕೊಟ್ಟ ಬೆಲ್ಲದ, ಭೇಟಿ ಮಾಡಲು ಇನ್ನಿಲ್ಲದ ಕಸರತ್ತು ನಡೆಸಿದರೂ ಪ್ರಯೋಜನವಾಗಲಿಲ್ಲ. ಕಚೇರಿಯ ಮೂರನೇ ಮಹಡಿಯಲ್ಲಿ ಬೆಲ್ಲದ ಇದ್ದರೆ, ನಾಲ್ಕನೇ ಮಹಡಿಯಲ್ಲಿದ್ದ ಅರುಣ್​ ಸಿಂಗ್​ ಭೋಜನ ವಿರಾಮಕ್ಕೆಂದು ಕೆ.ಕೆ.ಗೆಸ್ಟ್​ ಹೌಸ್​ಗೆ ಹೊರಟುಬಿಟ್ಟರು. ನಂತರ ಈ ವಿಷಯ ತಿಳಿದ ಬೆಲ್ಲದ, ಪಕ್ಷದ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​ ಭೇಟಿಯಾಗಿ ತಮ್ಮ ಅಹವಾಲು ಹೇಳಿಕೊಂಡರು.

ಪಕ್ಷ, ಸರ್ಕಾರದಲ್ಲಿ ಗೊಂದಲವಿಲ್ಲ

ಬೆಂಗಳೂರು: ಪ ಹಾಗೂ ಸರ್ಕಾರದಲ್ಲಿ ಯಾವುದೇ ಗೊಂದಲವಿಲ್ಲ. ಯಾರೋ ಒಂದಿಬ್ಬರು ಮಾತನಾಡುತ್ತಾರೆ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಗರಂ ಆದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ವಿಚಾರದಲ್ಲೂ ಗೊಂದಲವಿಲ್ಲ. ಅಪಸ್ವರ ಎತ್ತಿದವರಿಗೆ ಉಸ್ತುವಾರಿ ಭೇಟಿಗೆ ಅವಕಾಶ ನೀಡಲಾಗಿಲ್ಲ. ಅಂತಹವರ ವಿರುದ್ಧ ಹೈಕಮಾಂಡ್​ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು. ಮೇಲ್ಮನೆ ಸದಸ್ಯ ಎಚ್​.ವಿಶ್ವನಾಥ್​ ಅವರು ಬಿ.ವೈ.ವಿಜಯೇಂದ್ರ ವಿರುದ್ಧ ಮಾಡಿರುವ ಆರೋಪ ಕುರಿತ ಪ್ರಶ್ನೆಗೆ, ಅದೆಲ್ಲ ಸುಳ್ಳು. ನೀರಾವರಿ ಇಲಾಖೆ ಅದಕ್ಕೆ ಸ್ಪಷ್ಟನೆ ನೀಡುತ್ತದೆ ಎಂದು ಹೇಳಿದರು. ಯಾರೋ ಒಬ್ಬಿಬ್ಬರು ಮಾತನಾಡಿದ್ದಕ್ಕೆ ತಪ್ಪು ಗ್ರಹಿಕೆ ಆಗುತ್ತಿವೆ. 60 ಶಾಕಸರು ಉಸ್ತುವಾರಿಯನ್ನು ಭೇಟಿ ಮಾಡಿದ್ದಾರೆ. ಮೊದಲಿಂದಲೂ ನಮ್ಮ ವಿರುದ್ಧ ಮಾತನಾಡುವವರು ಇದ್ದಾರೆ. ಎಲ್ಲ ಸಂಪುಟ ಸಚಿವರು ಒಟ್ಟಾಗಿ ಅಭಿವೃದ್ಧಿ ಕಡೆ ಗಮನ ಕೊಡುತ್ತಿದ್ದೇವೆ. ಒಬ್ಬಿಬ್ಬ ಶಾಸಕರಿಗೆ ಅಸಮಾಧಾನ ಇದ್ದರೆ ಕರೆಸಿ ಮಾತನಾಡುತ್ತೇನೆ ಎಂದರು.

ಕಾರ್ಯವೈಖರಿ ಬದಲಿಗೆ ಮನಸ್ಸು

ಬೆಂಗಳೂರು: ಭಿನ್ನಮತ, ಆರೋಪ& ಪ್ರತ್ಯಾರೋಪಗಳಿಂದ ಬೇಸತ್ತು ಹೋಗಿರುವ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಇನ್ನು ಮುಂದೆ ತಮ್ಮ ಕಾರ್ಯ ವೈಖರಿ ಬದಲಿಸಿಕೊಳ್ಳಲು ನಿರ್ಧರಿಸಿದ್ದಾರೆ. ಸಿಎಂ ಹುದ್ದೆ ಅಲಂಕರಿಸಿದ ದಿನದಿಂದ ಈತನಕ ಯಾವುದೇ ಸಭೆ, ಕಾರ್ಯಕ್ರಮಗಳಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಹಾಜರಿರುವುದನ್ನು ರೂಢಿಸಿಕೊಂಡಿರುವ ಬಿಎಸ್​ವೈ, ಮುಂದೆ ಶಾಸಕರಿಗೆ ಹೆಚ್ಚು ಸಮಯ ಮೀಸಲಿಡಲು ತೀಮಾರ್ನಿಸಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿವೆ. ಯುವಕರು ನಾಚಿಸುವಂತೆ ನೀವು ಕೆಲಸ ಮಾಡುತ್ತಿದ್ದೀರಿ. ಅದರ ಬಗ್ಗೆ ನಮಗೆ ತಕರಾರಿಲ್ಲ. ಆದರೆ, ಶಾಸಕರು ಬಂದ ಸಂದರ್ಭದಲ್ಲಿ ಅವರ ಜತೆ ಮುಖ ಕೊಟ್ಟು ಮಾತನಾಡಿದರೂ ಸಾಕು, ಎಷ್ಟೋ ಸಮಾಧಾನವಾಗುತ್ತದೆ ಎಂಬ ಸಲಹೆಗಳನ್ನು ಆಪ್ತರು, ಹಿತೈಷಿಗಳು ಸಿಎಂಗೆ ನೀಡಿದ್ದಾರೆ. ಆಪ್ತರ ಸಲಹೆ ಗಂಭೀರವಾಗಿ ಪರಿಗಣಿಸಿರುವ ಸಿಎಂ, ಶಾಸಕರಿಗೆ ಹೆಚ್ಚು ಆದ್ಯತೆ ನೀಡಿ, ಅವರಿಗೆ ಸಮಯ ಮೀಸಲಿಟ್ಟು ಕೆಲಸ ಮಾಡಲು ತೀಮಾರ್ನಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ನಿಗಮಗಳ ಪುನಾರಚನೆ ನಿಶ್ಚಿತ?

ನಿರೀೆಯಂತೆ ಕೆಲಸ ಮಾಡದ ಬಹುತೇಕ ನಿಗಮ&ಮಂಡಳಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಕಾರ್ಯವೈಖರಿ ಬಗ್ಗೆ ಬಿಜೆಪಿ ರಾಜ್ಯ ಕೋರ್​ ಕಮಿಟಿ ಸಭೆ ಅಸಮಾಧಾನ ವ್ಯಕ್ತಪಡಿಸಿದೆ. ನೇಮಕ ವೇಳೆ ಸಮತೋಲನ ಕಾಪಾಡಿಕೊಂಡಿಲ್ಲ ಎಂಬ ಅಪಸ್ವರ ಇತ್ತು. ಕರೊನಾ ಕಾಲದಲ್ಲಿಯೂ ಬಹುಪಾಲು ನಿಗಮ&ಮಂಡಳಿಗಳು ಸಕ್ರಿಯವಾಗಿಲ್ಲ. ಇದರಿಂದಾಗಿ ಬೊಟ್ಟು ಮಾಡಿ ತೋರಿಸುತ್ತಿದ್ದವರಿಗೆ ಬಲವಾದ ಆಧಾರ ಸಿಕ್ಕಂತಾಗಿದೆ. ಇತ್ತ ಸರ್ಕಾರ, ಅತ್ತ ಪಕ್ಷಕ್ಕೆ ಪೂರಕವಲ್ಲದ ನಿಗಮ&ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಬದಲಿಸಿ ಹೊಸಬರನ್ನು ನೇಮಿಸಲು ಸಭೆ ನಿರ್ಧರಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸಿಎಂಗೆ ವೀರಶೈವ ಮಹಾಸಭಾ ಬೆಂಬಲ

ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿಗಳು ಹರಿದಾಡು ತ್ತಿರುವ ಬೆನ್ನಲ್ಲೇ ಅಖಿಲ ಭಾರತ ವೀರಶೈವ ಮಹಾಸಭಾ ಬಿ.ಎಸ್​. ಯಡಿಯೂರಪ್ಪ ಪರ ನಿಂತಿದೆ. "ನಮ್ಮ ಬೆಂಬಲ ಏನಿದ್ದರೂ ಯಡಿಯೂರಪ್ಪ ಅವರಿಗೇ' ಎಂದು ಮಹಾಸಭಾ ಅಧ್ಯಕ್ಷರೂ ಆದ ಕಾಂಗ್ರೆಸ್​ನ ಹಿರಿಯ ಶಾಸಕ ಡಾ.ಶಾಮನೂರು ಶಿವಂಕರಪ್ಪ ಹೇಳಿದ್ದಾರೆ. ವೀರಶೈವ ಮಠಾಧೀಶರು ಯಡಿಯೂರಪ್ಪರಿಗೆ ಬೆಂಬಲ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಮಹಾಸಭಾ ನಿಲುವನ್ನು ಮಾತ್ರ ಸ್ಪಷ್ಟಪಡಿಸಿದರು.