ಮಂಡ್ಯ: ನಗರದ ಸರ್‌ಎಂವಿ ಪ್ರತಿಮೆ ಎದುರು ನಡೆಯುತ್ತಿರುವ ಕಾವೇರಿ ಹೋರಾಟವನ್ನು ಬೆಂಬಲಿಸಿ ಕಲಾವಿದರು ನೀಡಿದ ಪ್ರದರ್ಶನ ಗಮನಸೆಳೆಯಿತು.
ಕೋಲಾರ ಜಿಲ್ಲೆ ಕೆಜಿಎಫ್‌ನ ಕಲಾವಿದರೂ ಆದ ಸಿಂಹಘರ್ಜನೆ ವೇದಿಕೆ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಯಮಧರ್ಮನಾಗಿ ಹಾಗೂ ಶ್ರೀರಂಗಪಟ್ಟಣ ತಾಲೂಕು ಮರಗಾಲದ ಮಂಜುನಾಥ್ ಚಿತ್ರಗುಪ್ತನ ಪಾತ್ರದಲ್ಲಿ ಕಾಣಿಸಿಕೊಂಡರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಹೋರಾಟ ಬೆಂಬಲಿಸಿ ಯಮಧರ್ಮ, ಚಿತ್ರಗುಪ್ತನ ವೇಷದಲ್ಲಿಯೇ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಬಳಿಕ ಕಾವೇರಿ ನೀರಿನ ವಿಚಾರದಲ್ಲಿ ಆಗುತ್ತಿರುವ ಅನ್ಯಾಯ ಬಗ್ಗೆ ತಮ್ಮ ಶೈಲಿಯಲ್ಲಿ ಮಾತನಾಡಿದರು. ನೀರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅನ್ಯಾಯ ಮಾಡುತ್ತಿರುವವರನ್ನು ಯಮಲೋಕಕ್ಕೆ ಕರೆದುಕೊಂಡು ಹೋಗೋಣಾ. ಭೂಲೋಕದಲ್ಲಿ ರೈತರು ನೀರಿಗಾಗಿ ಪರದಾಟ ನಡೆಸುತ್ತಿದ್ದಾರೆ. ತಮಿಳುನಾಡಿಗೆ ನೀರು ಹೋಗುತ್ತಿರುವುದನ್ನು ನಿಲ್ಲಿಸಿ. ಧರ್ಮ ಯಮ ಧರ್ಮ ಎಂದು ಘೋಷಣೆ ಕೂಗಿದರು.