ಜಿಲ್ಲೆ

ಸರ್ಕಾರದಿಂದ ಕಲಾವಿದರಿಗೆ ಸಿಗಲಿ ಪ್ರೋತ್ಸಾಹ

ಹುಬ್ಬಳ್ಳಿ: ಕನ್ನಡ ಕಲಾ ಸೇವಾ ಸಂಘ ಹಾಗೂ ಅನುರಾಗ ಸಂಗಮ ಸಂಗೀತ ಸಂಸ್ಥೆ ಆಶ್ರಯದಲ್ಲಿ ಇಲ್ಲಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ‘ಮಗ ಹೋದರೂ ಮಾಂಗಲ್ಯ ಬೇಕು’ ಎಂಬ ಸಾಮಾಜಿಕ ನಾಟಕವನ್ನು ಉದ್ಘಾಟಿಸಲಾಯಿತು.

ಸರ್ವಧರ್ಮ ಸಮಾಜ ಸೇವಕ ಡಾ. ರಮೇಶ ಮಹಾದೇವಪ್ಪನವರ ಉದ್ಘಾಟಿಸಿ ಮಾತನಾಡಿ, ಇತ್ತೀಚೆಗೆ ಕಲಾರಂಗ ಅವಜ್ಞೆಗೆ ಒಳಗಾಗುತ್ತಿದೆ. ಕಲಾವಿದರು ಮತ್ತವರ ಕಂಪನಿಗಳು ಪ್ರೇಕ್ಷಕರಿಲ್ಲದೇ ಬಿಕೋ ಎನ್ನುತ್ತಿವೆ. ರಾಜ್ಯ ಸರ್ಕಾರವು ಮಧ್ಯೆ ಪ್ರವೇಶಿಸಿ ಕಲಾವಿದರು ಮತ್ತು ನಾಟಕ ಕಂಪನಿಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.

ಕನಕದಾಸ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಡಾ. ಶಾಂತಣ್ಣ ಕಡಿವಾಲ, ಉದ್ಯಮಿ ಸಂಭಾಜಿ ಕಲಾಲ, ಚಲನಚಿತ್ರ ನಿರ್ದೇಶಕ ಬಸವರಾಜ ಪಟ್ಟಣಶೆಟ್ಟಿ, ಈಶ್ವರಿ ಫೌಂಡೇಷನ್ ಅಧ್ಯಕ್ಷ ಸಂತೋಷ ವರ್ಣೇಕರ, ವಿ.ಜಿ. ಪಾಟೀಲ, ಗದಿಗೆಯ್ಯ ಹಿರೇಮಠ, ಬಸವರಾಜ ಸಜ್ಜನ, ಭಾರತಿ ದಾವಣಗೆರೆ, ಸ್ನೇಹಾ ಜಾಧವ, ಜೂನಿಯರ್ ಪ್ರಭಾಕರ ಇತರರು ಇದ್ದರು.