ಜಿಲ್ಲೆ

ರಂಗಮಂದಿರ ನವೀಕರಣಕ್ಕೆ ಕಲಾವಿದರ ವೇದಿಕೆ ಒತ್ತಾಯ

Vijayanagara - Veerendra

ಹೊಸಪೇಟೆ: ಇಲ್ಲಿನ ನಗರಸಭೆ ಆವರಣದಲ್ಲಿರುವ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ ಕಲಾಮಂದಿರವನ್ನು ನವೀಕರಣಗೊಳಿಸಬೇಕು. ಸಂಗೀತ ಶಿಕ್ಷಕರ ನೇಮಕಾತಿ ಮಾಡಿಕೊಳ್ಳುವಂತೆ ಸರ್ಕಾರದ ಗಮನ ಸೆಳೆಯಬೇಕು ಎಂದು ಒತ್ತಾಯಿಸಿ ವಿಜಯನಗರ ಕಲಾವಿದರ ವೇದಿಕೆ ಸದಸ್ಯರು ಶಾಸಕ ಎಚ್.ಆರ್.ಗವಿಯಪ್ಪಗೆ ಒತ್ತಾಯಿಸಿದರು.

ಈ ಕುರಿತು ಸೋಮವಾರ ಮನವಿ ಸಲ್ಲಿಸಿ, ದಿ.ಎಂ.ಪಿ. ಪ್ರಕಾಶ ಅವರು ಈ ಭಾಗದಲ್ಲಿ ಸಂಗೀತ, ಸಾಹಿತ್ಯ ಮತ್ತು ಕಲೆಯ ರಾಯಭಾರಿಯಂತಿ ದ್ದರು. ಹೀಗಾಗಿ ಅವರ ಹೆಸರಲ್ಲಿ ಹೊಸಪೇಟೆ ನಗರಸಭೆ ಆವರಣದಲ್ಲಿ ರಂಗಮAದಿರ ನಿರ್ಮಿಸಲಾಗಿದೆ. ಆದರೆ, ತಾಂತ್ರಿಕ ತೊಂದರೆಯಿAದ ಕೆಲ ವರ್ಷಗಳಿಂದ ಬಾಗಿಲು ಮುಚ್ಚಿದೆ. ಅದನ್ನು ನವೀಕರಣಗೊಳಿಸಿದರೆ, ಈ ಭಾಗದ ಅನೇಕ ರಂಗಭೂಮಿ, ಸಂಗೀತ ಹಾಗೂ ಕಲಾವಿದರಿಗೆ ಅನುಕೂಲವಾಗುತ್ತದೆ.

ಅಲ್ಲದೇ, ಕಳೆದ ೧೫ ವರ್ಷಗಳಿಂದ ಸರ್ಕಾರ ಸಂಗೀತ, ನಾಟಕ ಹಾಗೂ ಚಿತ್ರಕಲೆ ಶಿಕ್ಷಕರ ನೇಮಕಾತಿ ನಡೆಸಿಲ್ಲ. ಆಯಾ ವಿಷಯದ ಪದವೀಧ ರರು ನಿರುದ್ಯೋಗ ಸಮಸ್ಯೆ ಎದುರಿಸುವ ಜತೆಗೆ ವಯೋಮಿತಿ ಮುಗಿಯುವ ಆತಂಕ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಶಿಕ್ಷಕರ ನೇಮ ಕಾತಿ ನಡೆಸುವಂತೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.

ವಿಜಯನಗರ ಕಲಾವಿದರ ವೇದಿಕೆಯ ಅನುರಾಧ ವಾಲ್ಮೀಕಿ, ಎಂ.ವಸAತ, ಯಲ್ಲಪ್ಪ ಭಂಡಾರಿ, ಪೂಜಾರಿ ದುರ್ಗೇಶ್, ಕಾವ್ಯ ಬಾಯಿ, ರೇಣುಕಾ ಮತ್ತತರರು ಶಾಸಕ ಎಚ್.ಆರ್.ಗವಿಯಪ್ಪಗೆ ಸೋಮವಾರ ಮನವಿ ಸಲ್ಲಿಸಿದರು.