ಇಳಕಲ್ಲದ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸ್ವರಸಿಂಧು ತಂಡದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟೇಶ ಸಾಕಾ, ಪುಣೆಯ ಇಂಜಿನಿಯರ್ ರವೀಂದ್ರ ದೇವಗಿರಿಕರ, ಸ್ನೇಹರಂಗ ಸದಸ್ಯರಾದ ಕೆ. ಎ. ಬನ್ನಟ್ಟಿ , ಸಂಗೀತ ಸ್ಟುಡಿಯೋ ಮಾಲೀಕ ಕುಮಾರ ಸಪ್ಪಂಡಿ, ಪ್ರಕಾಶ ಮಠ ಇತರರಿದ್ದರು. 
ಜಿಲ್ಲೆ

ಕಲಾವಿದರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ

ಗಿರೀಶ ಸಗರ

ಇಳಕಲ್ಲ(ಗ್ರಾ) : ಕಲಾವಿದರಲ್ಲಿ ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ರಂಗಮಂಚದ ಮೇಲೆ ನಿರೂಪಿಸುವಾಗಲೇ ಪ್ರೇಕ್ಷಕರಿಗೆ ಕಂಡು ಬರುತ್ತದೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಸ್ಥಳೀಯ ವಿಜಯ ಮಹಾಂತೇಶ ಅನುಭವ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವರಸಿಂಧು ತಂಡದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಲೆಯ ತವರೂರಾದ ನಗರದಲ್ಲಿ ಸಾಕಷ್ಟು ಅಭಿಜಾತ ಕಲಾವಿದರು ತುಂಬಿಕೊಂಡಿದ್ದಾರೆ. ಅವರ ಪ್ರತಿಭೆ ಅಪಾರ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೆಂಕಟೇಶ ಸಾಕಾ ಮಾತನಾಡಿ, ಸಂಗೀತದ ರಸ ಹೀರಿಕೊಳ್ಳುವ ಮನಸ್ಸು ನಮ್ಮದಾಗಬೇಕು ಎಂದರು.

ಪುಣೆಯ ಇಂಜಿನಿಯರ್ ರವೀಂದ್ರ ದೇವಗಿರಿಕರ, ಸ್ನೇಹರಂಗ ಸದಸ್ಯರಾದ ಕೆ.ಎ.ಬನ್ನಟ್ಟಿ, ಸ್ಟುಡಿಯೋ ಮಾಲೀಕ ಕುಮಾರ ಸಪ್ಪಂಡಿ, ವಿಜಯಪುರದ ಪ್ರಕಾಶ ಮಠ ಅವರನ್ನು ಸಂಸ್ಥೆ ವತಿಯಿಂದ ಸತ್ಕರಿಸಲಾಯಿತು.

ಗುರುಮಹಾಂತ ಶ್ರೀಗಳು, ಡಾ. ಬಸವಲಿಂಗ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು. ಪರಶುರಾಮ ರಾಜೊಳ್ಳಿ ಅಧ್ಯಕ್ಷತೆ ವಹಿಸಿದ್ದರು.
ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ರವಿಶಂಕರ ಬಸವಾ, ತಂಡದ ಸದಸ್ಯರಾದ ಗೋಪಿ ಕಠಾರೆ, ಪರಶುರಾಮ ಪವಾರ, ನರಸಿಂಗ ಕಾಟ್ವಾ, ರೇಖಾ ಕಠಾರೆ ಉಪಸ್ಥಿತರಿದ್ದರು.