ಹುಬ್ಬಳ್ಳಿ: ರಂಗಭೂಮಿ, ಹಿಂದಿ ಚಲನಚಿತ್ರ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ನಟಿ ಶಾಂತಾ ಹುಬ್ಳಿಕರ್ ಅಭಿಜಾತ ಕಲಾವಿದೆ ಎಂದು ಎಂದು ಅದರಗುಂಚಿ ಮಹಿಳಾ ಬ್ಯಾಂಕಿನ ಚೇರ್ಮನ್ ಗಿರೀಜಾ ಪಾಟೀಲ ಅಭಿಪ್ರಾಯಪಟ್ಟರು.
ತಾಲೂಕಿನ ಅದರಗುಂಚಿ ಗ್ರಾಮದ ಸಿಜಿ ಪಾಟೀಲರ ಮನೆಯಂಗಳದಲ್ಲಿ ಅದರಗುಂಚಿ ಶಂಕರಗೌಡರ ಪ್ರತಿಷ್ಠಾನದ ಸಹಕಾರದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಹಿರಿಯ ನಟಿ ಶಾಂತಾ ಹುಬ್ಳಿಕರ್ ಅವರ ಕುರಿತ "ನಾಳಿನ ಚಿಂತ್ಯಾಕ' ಪುಸ್ತಕ ಬಿಡುಗಡೆ ಮತ್ತು ಸಂವಾದಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಂತಾ ಹುಬ್ಳಿಕರ್ ಅವರು ಬಡತನದಲ್ಲಿ ಹುಟ್ಟಿ ಬೆಳೆದರೂ ಹಿಂದಿ ಸಿನಿಮಾಗಳಲ್ಲಿ ಅದ್ಭುತ ಪಾತ್ರ ನಿರ್ವಹಿಸಿ ಹೆಸರು ಮಾಡಿದ ಧೀಮಂತ ಕಲಾವಿದೆ. ಅವರು ಅದರಗುಂಚಿ ಗ್ರಾಮದವರು ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದರು.
ಶಾಂತಾ ಹುಬ್ಳಿಕರ್ ಅವರ ಕೃತಿಯ ಕುರಿತು ಶಾಮಲಾ ಗುರುಪ್ರಸಾದ್, ಪತ್ರಕರ್ತ ಬಂಡು ಕುಲಕಣಿರ್ ಅವರು ವಿಮರ್ಶೆ ಮಾಡಿದರು.
ಅತಿಥಿಗಳಾಗಿದ್ದ ಹನುಮಾಕ್ಸಿ ಗೋಗಿ, ತೇಜೋವತಿ, ನಿರ್ಮಲಾ ಶೆಟ್ಟರ್, ಅನನ್ಯ ಗುರುಪ್ರಸಾದ್, ಗೌಡಪ್ಪಗೌಡ ಪಾಟೀಲ್, ಸಿ.ಜಿ. ಪಾಟೀಲ್, ಸಂಕನಗೌಡ ಸಂಕಣ್ಣವರ್, ಪ್ರಭುಗೌಡ ನರಗುಂದ ಇತರರು ಉಪಸ್ಥಿತರಿದ್ದರು.
ಡಾ. ರಾಮು ಮೂಲಗಿ ಪ್ರಾಥಿರ್ಸಿದರು. ಶಾಮಸುಂದರ್ ಬಿದರಕುಂದಿ ಕಾರ್ಯಕ್ರಮ ನಿರೂಪಿಸಿದರು. ಎಂ.ಕೆ. ಪಾಟೀಲ ವಂದಿಸಿದರು.