ಜಿಲ್ಲೆ

ಜನರ ಸಂಕಷ್ಟಕ್ಕೆ ಮಿಡಿಯುವ ಮಜೇಥಿಯಾ, ಆರು ಜನರಿಗೆ ಕೃತಕ ಕಾಲು ಜೋಡಣೆ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಮಜೇಥಿಯಾ ಫೌಂಡೇಷನ್ ವತಿಯಿಂದ ನಗರದ ಐಬಿ ರಸ್ತೆಯಲ್ಲಿರುವ ಫೌಂಡೇಷನ್ ಕಚೇರಿ ಆವರಣದಲ್ಲಿ ಆರು ಜನರಿಗೆ ಕೃತಕ ಕಾಲು ಜೋಡಣೆ ಶಿಬಿರ ಶುಕ್ರವಾರ ನಡೆಯಿತು.

ಸಾನ್ನಿಧ್ಯ ವಹಿಸಿದ್ದ ಗುಜರಾತ್ ಸೌರಾಷ್ಟ್ರದ ಶ್ರೀ ಸದ್ಗುರು ಆಶಿಶ್ ವ್ಯಾಸ್ ಸ್ವಾಮೀಜಿ, ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಹಸ್ತಾಂತರಿಸಿದರು. ಜಿತೇಂದ್ರ ಮಜೇಥಿಯಾ ಅವರು ಅನೇಕ ವರ್ಷಗಳಿಂದ ಇಂತಹ ಪುಣ್ಯ ಕಾರ್ಯಗಳಲ್ಲಿ ತೊಡಗಿದ್ದಾರೆ. ಆ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ಜನರಿಂದ ಜನರಿಗಾಗಿ ತತ್ವದ ತಳಹದಿ ಮೇಲೆ ಸೇವೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಅತಿಥಿಗಳಾಗಿದ್ದ ಸಮಾಜ ಸೇವಕ ರಜತ್ ಉಳ್ಳಾಗಡ್ಡಿಮಠ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ನೊಂದ ಕುಟುಂಬಗಳಿಗೆ ಮಜೇಥಿಯಾ ಅವರು ಸದಾ ಸಹಾಯ ಹಸ್ತ ನೀಡುತ್ತಿರುವುದರಿಂದ ಅನೇಕ ಬಡ ಕುಟುಂಬಗಳಿಗೆ ಅನುಕೂಲವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಫೌಂಡೇಷನ್ ಚೇರ್ಮನ್ ಜಿತೇಂದ್ರ ಮಜೇಥಿಯಾ ಮಾತನಾಡಿ, ಜನರ ಸಹಕಾರ, ಪ್ರೀತಿ ವಾತ್ಸಲ್ಯಗಳೇ ಸೇವೆ ಮಾಡಲು ನನಗೆ ಸ್ಫೂರ್ತಿಯಾಗಿವೆ ಎಂದರು.

ಕಶ್ಯಪ್ ಮಜೇಥಿಯಾ, ಕಾರ್ಯದರ್ಶಿ ಅಮರೇಶ ಹಿಪ್ಪರಗಿ, ಶ್ರೀಧರ ಜೋಶಿ, ಡಾ. ಸುನೀಲ ಕುಕನೂರ, ಡಾ. ಮುಸ್ಕಾನ ಅಹ್ಮದ್, ಶಂಕರ ಕಮಟೆ ಉಪಸ್ಥಿತರಿದ್ದರು.

ನವೀನ ಮಾಲಿನ ಸ್ವಾಗತಿಸಿದರು. ರೋಹನ ಗೊಂಧಕರ ವಂದಿಸಿದರು.