ಹುಬ್ಬಳ್ಳಿ: ಇಲ್ಲಿಯ ರೋಟರಿ ಕ್ಲಬ್ 76ನೇ ವಾರ್ಷಿಕೋತ್ಸವದ ಅಂಗವಾಗಿ ಮಹಾವೀರ ಲಿಂಬ್ ಸೆಂಟರ್ ಸಹಯೋಗದಲ್ಲಿ ಮಂಗಳವಾರ ಕೃತಕ ಅಂಗ ಜೋಡಣೆ ಶಿಬಿರ ಏರ್ಪಡಿಸಲಾಗಿತ್ತು.
ಮೂರು ಹಂತಗಳಾಗಿ ನೂರು ಬಡವರು ಮತ್ತು ನಿರ್ಗತಿಕರಿಗೆ ಕೃತಕ ಅಂಗ ಅಳವಡಿಸುವ ವಾಗ್ದಾನ ಮಾಡಲಾಯಿತು.
ದಾನಿಗಳಾದ ಡಾ. ಎನ್.ಎ. ಚರಂತಿಮಠ 10 ಜನರಿಗೆ, ವಿಮಲ್ ಭಂಡಾರಿ 5 ಮತ್ತು 30 ಜನರಿಗೆ ಕ್ಲಬ್ನ ಸಮುದಾಯ ಸೇವೆ ಅಡಿಯಲ್ಲಿ ಕೃತಕ ಕೈಕಾಲು ಜೋಡಿಸಲಾಯಿತು. ಒಟ್ಟು 45 ಜನರು ಶಿಬಿರದ ಪ್ರಯೋಜನ ಪಡೆದರು.
ಫಲಾನುಭವಿ ಮಹಾಂತೇಶ ಮಾತನಾಡಿ, ಮೊಣಕಾಲು ಮುರಿದು ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಕೃತಕ ಕಾಲು ಜೋಡಣೆ ಮಾಡಿರುವುದರಿಂದ ಹೊಸ ವಿಶ್ವಾಸ ಬಂದಿದೆ. ಮಹಾವೀರ ಲಿಂಬ್ ಸೆಂಟರ್ ಮತ್ತು ಹುಬ್ಬಳ್ಳಿಯ ರೋಟರಿ ಕ್ಲಬ್ ಸಂಸ್ಥೆಗೆ ಕೃತಜ್ಞತೆ ಸಲ್ಲಿಸುವೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ, ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ ಅವರು ಶಿಬಿರ ಆಯೋಜಿಸಿದ್ದರು.
ರೋಟರಿ ಕ್ಲಬ್ ಕಾರ್ಯದರ್ಶಿ ವಸಂತ ಭಸ್ಮೆ, ರೋಟರಿ ಪಬ್ಲಿಕ್ ಇಮೇಜ್ ಚೇರ್ಮನ್ ಮಂಜುನಾಥ ಹೊಂಬಳ, ಐಇಎಂಎಸ್ - ಬಿ ಸ್ಕೂಲ್ ನ ಪ್ರೊ. ಪ್ರೀತಿ ಬಿ. ಗೌಡರ, ರೋಟರ್ಯಾಕ್ಟ್ ವಿದ್ಯಾರ್ಥಿಗಳಾದ ಅರುಣ, ದಾನೇಶ, ಪ್ರತಿಕ, ಕುಮಾರ ಪಾಲ್ಗೊಂಡಿದ್ದರು.