ಹುಬ್ಬಳ್ಳಿ: ಇಲ್ಲಿಯ ಇನ್ನರ್ವ್ಹೀಲ್ ಕ್ಲಬ್ ಮತ್ತು ಆಲ್ ಇಂಡಿಯಾ ಜೈನ್ ಯುಥ್ ಫೆಡರೇಶನ್ನ ಮಹಾವೀರ ಲಿಂಬ್ ಸೆಂಟರ್ ಸಂಯುಕ್ತ ಆಶ್ರಯದಲ್ಲಿ ಉಚಿತ ಕೃತಕ ಕಾಲು ಜೋಡಣೆ ಶಿಬಿರ ಶನಿವಾರ ಕಿಮ್ಸ್ ಆವರಣದ ಲಿಂಬ್ ಸೆಂಟರ್ನಲ್ಲಿ ನಡೆಯಿತು.
ಅಂಗವಿಕಲರು ಆತ್ಮವಿಶ್ವಾಸದಿಂದ ಸ್ವಾವಲಂಬಿಗಳಾಗಿ ಜೀವನ ನಡೆಸಲು ಸಹಾಯವಾಗಲೆಂದು 20 ಜನರಿಗೆ ಶಿಬಿರದಲ್ಲಿ ಕಾಲು ಜೋಡಣೆ ಮಾಡಲಾಯಿತು.
ರಾಮದುರ್ಗ, ಹಾನಗಲ್, ಹೊನ್ನಾವರ, ದಾಂಡೇಲಿ, ಬೆಳಗಾವಿ, ವಿಜಯಪುರ, ಹಾವೇರಿ, ಸೋಲ್ಲಾಪುರ, ಗದಗ, ಭಟ್ಕಳ ಮುಂತಾದೆಡೆಯಿಂದ ಲಾನುಭವಿಗಳು ಆಗಮಿಸಿದ್ದರು.
ಇನ್ನರ್ವ್ಹೀಲ್ ಕ್ಲಬ್ ಅಧ್ಯೆ ಹೇಮಾ ಹೊಸಮನಿ, ರೇಷ್ಮಾ ಭಾಗವತ, ಮಹಾವೀರ ಲಿಂಬ್ ಸೆಂಟರ್ ಅಧ್ಯ ಮಹೇಂದ್ರ ಸಿಂಘಿ, ಇತರರು ಶಿಬಿರದ ನೇತೃತ್ವ ವಹಿಸಿದ್ದರು.
ಜೋತ್ಸಾ ್ನ ಮೋಟಗಿ, ಮಮತಾ ಪಾಟೀಲ, ಪ್ರೇಮಾ ಪಾಟೀಲ, ಕವಿತಾ ಕಲ್ಯಾಣ, ಸೀಮಾ ರಾಥೋಡ, ಸತ್ಯಾ ಶಂಕರ, ಪ್ರಿಯದಶಿರ್ನಿ ಇತರರು ಉಪಸ್ಥಿತರಿದ್ದರು.