ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತಯಾರಿಕ ತರಬೇತಿ ಕಾರ್ಯಕ್ರಮವನ್ನು ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ್ ಎಸ್.ಬಂಗೇರ ಉದ್ಘಾಟಿಸಿದರು.  
ಜಿಲ್ಲೆ

ಕೃತಕ ಆಭರಣ, ಕರಕುಶಲ ವಸ್ತು ತಯಾರಿಕ ತರಬೇತಿ

Karthika K.S

ಹೆಬ್ರಿ: ರೋಟರಿ ಸಮುದಾಯದಳ ಹೆಬ್ರಿ, ರೋಬೋ ಸಾಫ್ಟ್ ಟೆಕ್ನಾಲಜಿಸ್ ಉಡುಪಿ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ರೋಟರಿ ಕ್ಲಬ್ ಮಣಿಪಾಲ, ಹೆಬ್ರಿ ಗ್ರಾಪಂ, ಧನಲಕ್ಷ್ಮೀ ಸಂಜೀವಿನಿ ಒಕ್ಕೂಟ ಹೆಬ್ರಿ ಆಶ್ರಯದಲ್ಲಿ ಹತ್ತು ದಿನಗಳ ಕೃತಕ ಆಭರಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳ ತಯಾರಿಕ ತರಬೇತಿ ಹೆಬ್ರಿ ಸಮುದಾಯ ಭವನದಲ್ಲಿ ನಡೆಯಿತು.

ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ್ ಎಸ್.ಬಂಗೇರ ಉದ್ಘಾಟಿಸಿದರು. ಭಾರತೀಯ ವಿಕಾಸ ಟ್ರಸ್ಟ್ ಹಿರಿಯ ಸಲಹೆಗಾರ ಜಗದೀಶ್ ಪೈ, ಮಣಿಪಾಲ ರೋಟರಿ ಕಾರ್ಯದರ್ಶಿ ಫರೀದಾ ಉಪ್ಪಿನ್, ಪ್ರಮುಖರಾದ ರಾಜವರ್ಮ ಅರಿಗ, ಹೆಬ್ರಿ ಸಮುದಾಯದಳ ಅಧ್ಯಕ್ಷ ಕೃಷ್ಣರಾಜ್ ಕೆ., ವೆಂಕಟಾಪುರ ಅಧ್ಯಕ್ಷ ರಾಮಕೃಷ್ಣ ಆಚಾರ್, ಉಮಾ, ಶಕುಂತಲಾ, ರಶ್ಮಿ ಭಟ್ ಉಪಸ್ಥಿತರಿದ್ದರು. ನಿತ್ಯಾನಂದ ಭಟ್ ನಿರೂಪಿಸಿದರು. ನಾಗನಂದಿನಿ ವಂದಿಸಿದರು.