ಧುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘದ ಕಲಾ ತಂಡದವರು ಬೀದಿ ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಿದರು. 
ಜಿಲ್ಲೆ

ಕಲಾ ತಂಡದಿಂದ ನಾಟಕ ಪ್ರದರ್ಶನ

Belagavi

ನಿಪ್ಪಾಣಿ: ಜಿಲ್ಲಾ ಪಂಚಾಯಿತಿ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಸಾಫಲ್ಯ ಗಡಿ ಸಾಂಸ್ಕೃತಿಕ ಹಾಗೂ ಸಮಾಜ ಸೇವಾ ಸಂಘ, ಮಲ್ಲಿಕವಾಡ ಸಂಯುಕ್ತಾಶ್ರಯದಲ್ಲ್ಲಿ ಧುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘದ ಕಲಾ ತಂಡದವರು ವಿವಿಧೆಡೆ ಗುರುವಾರ
ಬೀದಿ ನಾಟಕ ಪ್ರದರ್ಶಿಸಿದರು. ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆಗಟ್ಟುವಿಕೆ, ಮೂಢನಂಬಿಕೆ ತೊಲಗಿಸುವುದು, ಮಕ್ಕಳ ಶಿಕ್ಷಣ, ಅಸ್ಪಶ್ಯತಾ ಆಚರಣೆ ನಿರ್ಮೂಲನೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಗುವ ಸರ್ಕಾರದ ವಿವಿಧ ಅಭಿವೃದ್ಧಿ ನಿಗಮಗಳ ಯೋಜನೆಗಳ ಕುರಿತು ಜಾಗೃತಿ ಮೂಡಿಸಿದರು.

ಕಲಾ ತಂಡದ ಭರತ ಕಲಾಚಂದ್ರ, ಮಾರುತಿ ಕಾಮಗೌಡ, ಮಾರುತಿ ಕಮತೆ, ಪುಂಡಲೀಕ ನಾಯಿಕ, ವಿಷ್ಣು ಹಲಗೇಕರ, ಕಾಕಾಸಾಬ ದಾವಣೆ, ಸಂತ್ರಾಮ ಕಾಂಬಳೆ, ಸುಜಾತಾ ಮಗದುಮ್ಮ, ಸಾವಿತ್ರಿ ಹಳಕಲ್ ಇದ್ದರು. ರಾಜೇಂದ್ರ ಕೋಳಿ ಸ್ವಾಗತಿಸಿದರು. ಸುಪ್ರಿಯಾ ಕಲಾಚಂದ್ರ ವಂದಿಸಿದರು.