ಜಿಲ್ಲೆ

ಚಿತ್ರಕಲಾ ಆಸಕ್ತಿಗೆ ಪ್ರದರ್ಶನ ಸಹಕಾರಿ

ಸಿಂಧನೂರು: ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯ ಆಗಬೇಕೆಂದು ಕನಕದಾಸ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಎಂ.ದೊಡ್ಡಬಸವರಾಜ ಹೇಳಿದರು.

ನಗರದ ಸ್ತ್ರೀ ಶಕ್ತಿ ಭವನದಲ್ಲಿ ಖಾಸಗಿ ಕಾಲೇಜ್‌ಗಳ ಒಕ್ಕೂಟ ಹಾಗೂ ಉಪನ್ಯಾಸಕರ ಗೆಳೆಯರ ಬಳಗದಿಂದ ಆಯೋಜಿಸಿದ್ದ ಕಲಾವಿದ ಡಾ.ಮಲ್ಲಕಾರ್ಜುನ ಕಮತಗಿ ಅವರ ಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಸಾಹಿತಿ, ವಾಗ್ಮಿ, ಚಿತ್ರ ಕಲಾವಿದರೂ ಆಗಿರುವ ಮಲ್ಲಿಕಾರ್ಜುನ ಕಮತಗಿ ವೈಚಾರಿಕತೆಯನ್ನೂ ಬೆಳೆಸಿಕೊಂಡಿದ್ದಾರೆ. ವಿದ್ಯಾರ್ಥಿಗಳಲ್ಲಿ ಚಿತ್ರಕಲೆ ಬಗ್ಗೆ ಇರುವ ಆಸಕ್ತಿ ಹೊರ ತರಲು ಪ್ರದರ್ಶನ ಸಹಕಾರಿಯಾಗಿದೆ ಎಂದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಮಲ್ಲಯ್ಯ ಕಂದ ಮಾತನಾಡಿ, ಚಿತ್ರ ಕಲಾಕೃತಿಗಳು ಉತ್ತಮ ಸಂದೇಶ ನೀಡುತ್ತವೆ. ಕಲಾವಿದರ ಕೈಚಳಕ ಮೆಚ್ಚುವಂಥದ್ದಾಗಿದೆ ಎಂದು ತಿಳಿಸಿದರು. ಪ್ರಮುಖರಾದ ಬಸವರಾಜ ಬಾದರ್ಲಿ, ಎನ್.ಸತ್ಯನಾರಾಯಣ, ಮಂಜುನಾಥ ಸೋಮಲಾಪುರ, ಅನಿಲಕುಮಾರ, ವೆಂಕಟರಾವ್ ಮಿರಿಯಮ್, ಶಂಕರ ಗುರಿಕಾರ, ಶೇಕ್ಷಾವಲಿ, ಸುರೇಶರೆಡ್ಡಿ, ನರಸಪ್ಪ ಗಲಗ, ಆರ್.ವೆಂಕಟೇಶ್ವರಲು, ನೀಲಮ್ಮ, ಹೊಳೆಯಪ್ಪ, ಹನುಮಂತ ಕಮತಗಿ ಇದ್ದರು.