ಜಿಲ್ಲೆ

ಕಲಾವಿದ ವೀರೇಶ್ ರುದ್ರಸ್ವಾಮಿ ಬಾಗಲಕೋಟೆ ಇವರ ವರ್ಣಚಿತ್ರಗಳ ಪ್ರದರ್ಶನ

Mangaluru - Hariprasad Rai


ಮಂಗಳೂರು : ಆರ್ಟ್ ಕೆನರಾ ಟ್ರಸ್ಟ್ ವತಿಯಿಂದ ಎಸ್-ಕ್ಯೂಬ್ ಆರ್ಟ್ ಗ್ಯಾಲರಿಯ ಸಹಯೋಗದಲ್ಲಿ ಕಲಾವಿದ ವೀರೇಶ್ ರುದ್ರಸ್ವಾಮಿ ಬಾಗಲಕೋಟೆ ಇವರ ವರ್ಣಚಿತ್ರಗಳ ಪ್ರದರ್ಶನ ನಗರದ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ
ಉದ್ಘಾಟನೆಗೊಂಡಿತು. ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಬೆನೆಟ್ ಜಿ.ಅಮ್ಮಣ್ಣ ಮತ್ತು ವಾಸ್ತುಶಿಲ್ಪಿ ಎಂ. ವೆಂಕಟೇಶ್ ಪೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಲಾವಿದ ವೀರೇಶ್ ರುದ್ರಸ್ವಾಮಿ ಮಾತನಾಡಿ ‘ ನಾನು ಚಿಕ್ಕ ಹಳ್ಳಿಯಿಂದ ಬೆಂಗಳೂರಿನಂತಹ ದೊಡ್ಡ ನಗರಕ್ಕೆ ಪ್ರಯಾಣಿಸಿದೆ, ನಂತರ ನನ್ನ ಬೇರುಗಳಿಗೆ ಮರಳಿದೆ. ನನ್ನ ಅನುಭವಗಳು ಮತ್ತು ನಾನು ಎದುರಿಸಿದ ಕಷ್ಟಗಳು ನನ್ನ ಕಲೆಗೆ ಆಳವಾಗಿ ಸ್ಫೂರ್ತಿ ನೀಡಿವೆ ಎಂದರು
ಆರ್ಟ್ ಕೆನರಾ ಟ್ರಸ್ಟ್‌ನ ದೀಕ್ಷಿತ್ ಆರ್.ಪೈ ಕಾರ್ಯಕ್ರಮ ನಿರೂಪಿಸಿದರು. ಪ್ರದರ್ಶನವು ಅ.12ರವರೆಗೆ ಪ್ರತೀ ದಿನ ಬೆಳಗ್ಗೆ 11ರಿಂದ ಸಾಯಂಕಾಳ 7ರವರೆಗೆ ತೆರೆದಿರುತ್ತದೆ.ಉಚಿತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ.