ಮಂಗಳೂರು : ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಕ್)ನ ಮಂಗಳೂರು ಘಟಕ ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಹಯೋಗದಲ್ಲಿ ಮಂಗಳೂರು ಪರಂಪರೆಯ ರೇಖಾಚಿತ್ರಗಳ ಪ್ರದರ್ಶನ ನಗರದ ಬಲ್ಲಾಳ್‌ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಉದ್ಘಾಟನೆಗೊಂಡಿತು.
ಪ್ರದರ್ಶನ ಉದ್ಘಾಟಿಸಿದ ಹಿರಿಯ ಪತ್ರಕರ್ತ ಜಯಂತ್ ಕೋಡ್ಕಣಿ ಮಾತನಾಡಿ ‘ ಕಲಾವಿದರು ರಚಿಸಿದ ಚಿತ್ರಣಗಳು ನಗರವು ಹೇಗೆ ವಿಕಸನಗೊಂಡಿತು ಎಂಬುದರ ಐತಿಹಾಸಿಕ ದಾಖಲೆಯಾಗಿದೆ’ ಎಂದರು.
ಕಲಾವಿದರಾದ ಹರೀಶ್ ಕೊಡಿಯಾಲ್‌ಬೈಲ್, ಜೀವನ್ ಸಾಲಿಯಾನ್, ಸಂತೋಷ್ ಅಂದ್ರಾದೆ, ಸೈಯದ್ ಆಸಿಫ್ ಅಲಿ ಮತ್ತು ವಿಲ್ಸನ್ ಸೋಜಾ ಇವರುಗಳ ಕಲಾಕೃತಿಗಳು ಪ್ರದರ್ಶನಗೊಂಡವು. ಮಂಗಳೂರಿನ 40ಕ್ಕೂ ಹೆಚ್ಚು ಪಾರಂಪರಿಕ ತಾಣಗಳಲ್ಲಿ ಬಿಡಿಸಿದ ಸ್ಪಾಟ್ ಡ್ರಾಯಿಂಗ್‌ಗಳು ಮತ್ತು ರೇಖಾಚಿತ್ರಗಳನ್ನು ಪ್ರದರ್ಶನ ಒಳಗೊಂಡಿದೆ. ಇಂಟಾಕ್ ಮಂಗಳೂರು ಅಧ್ಯಾಯದ ಸಂಚಾಲಕ
ಸುಭಾಸ್ ಚಂದ್ರ ಬಸು ಕಾರ್ಯಕ್ರಮ ನಿರೂಪಿಸಿದರು.
ಪ್ರದರ್ಶನವು ನಗರದ ಬಲ್ಲಾಲ್‌ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಮೇ 25ರವರೆಗೆ ಬೆಳಿಗ್ಗೆ 11 ರಿಂದ ಸಂಜೆ 7 ರವರೆಗೆ ಸಾರ್ವಜನಿಕರಿಗೆ ತೆರೆದಿರುತ್ತದೆ.