ಬೆಂಗಳೂರು: ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿಗೆ ದೈಹಿಕ ಶಿಕ್ಷಣ, ಎಜುಕೇಟರ್ ಹಾಗೂ ಸಂಗೀತ ಮತ್ತು ಆರ್ಟ್ ಕ್ರಾಫ್ಟ್ ತರಬೇತಿ ನೀಡಲು ಅರೆಕಾಲಿಕ ಶಿಕ್ಷಕರ ಹುದ್ದೆಗೆ ಸರ್ಕಾರಿ ವೀಕ್ಷಣಾಲಯ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ದೈಹಿಕ ಹಾಗೂ ಯೋಗ ಶಿಕ್ಷಕರ ಹುದ್ದೆಗೆ ಡಿಪ್ಲೋಮಾ ಇನ್ ದೈಹಿಕ ಶಿಕ್ಷಣ, ಸಿಪಿಇಡ್‌ನಲ್ಲಿ ತೇರ್ಗಡೆ ಹೊಂದಿರಬೇಕು. ಎಜುಕೇಟರ್ ಹುದ್ದೆಗೆ ಈ.ಡಿಇಡ್ ತೇರ್ಗಡೆಯಾಗಿರಬೇಕು. ಸಂಗೀತ ಮತ್ತು ಆರ್ಟ್ ಕ್ರಾಫ್ಟ್ ಹುದ್ದೆಗೆ ಸಂಗೀತ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ಆಸಕ್ತರು 19ರ ಸಂಜೆ 4 ಗಂಟೆಯೊಳಗೆ ಅಗತ್ಯ ದಾಖಲಾತಿ (3 ಪ್ರತಿ) ಹಾಗೂ ಸ್ವವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು. ವಿಳಾಸ: ಸರ್ಕಾರಿ ವೀಕ್ಷಣಾಲಯ, ಬೆಂಗಳೂರು ನಗರ ಜಿಲ್ಲೆ, ಸಂತೆಬೀದಿ, ಸಿದ್ದಾರ್ಥ ಬಡಾವಣೆ, ಮಡಿವಾಳ, ಬೆಂಗಳೂರು-68.