ಜಿಲ್ಲೆ

ಶಾರದಾಂಬೆ ದರ್ಶನ ಪಡೆದ ಸಚಿವ ಸುಧಾಕರ್

Chikkamagaluru

ಶೃಂಗೇರಿ: ಶೃಂಗೇರಿ ಶ್ರೀಮಠಕ್ಕೆ ಶನಿವಾರ ವೈದ್ಯಕೀಯ ಸಚಿವ ಡಾ. ಸುಧಾಕರ್ ಭೇಟಿ ನೀಡಿ ಶ್ರೀ ಶಾರದಾಂಬ ದೇವಾಲಯ, ಶ್ರೀ ಶಕ್ತಿಗಣಪತಿ ಹಾಗೂ ತೋರಣಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ನರಸಿಂಹವನದ ಗುರು ನಿವಾಸಕ್ಕೆ ತೆರಳಿ ಜಗದ್ಗುರುಗಳಾದ ಶ್ರೀ ಭಾರತೀತೀರ್ಥರು ಹಾಗೂ ಶ್ರೀ ವಿಧುಶೇಖರಭಾರತೀ ಸ್ವಾಮೀಜಿಯನ್ನು ಭೇಟಿ ಮಾಡಿ ಆರ್ಶೀವಾದ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಸುಧಾಕರ್, ರಾಜ್ಯದಲ್ಲಿ ಕರೊನಾ ಇಳಿಮುಖವಾಗಿದೆ. 108 ಆಂಬುಲೆನ್ಸ್ ಸೇವೆ ಇನ್ನಷ್ಟು ಗ್ರಾಮೀಣ ಪ್ರದೇಶದ ಜನರನ್ನು ತಲುಪಲು ಹೊಸ ರೂಪುರೇಷೆ ತಯಾರಿಸಲಾಗುತ್ತಿದ್ದು, ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸುವ ಕುರಿತು ವಿಧಾನಸಭೆಯಲ್ಲಿ ರ್ಚಚಿಸಲಾಗುವುದು ಎಂದರು.