ಪರಶುರಾಮಪುರ: ಸ್ವಾತಂತ್ರ್ಯೋತ್ಸವಕ್ಕೆ ಹೋಬಳಿ ಕೇಂದ್ರದ ಎಲ್ಲ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು ಕೆಪಿಎಸ್ ಶಾಲಾ ಆವರಣಕ್ಕೆ ಬಂದು ಭಾಗವಹಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಎ.ಜಗಳೂರಸ್ವಾಮಿ ಹೇಳಿದರು.
ಗ್ರಾಮದ ಕರ್ನಾಟಕ ಪಬ್ಲಿಕ್‌ಸ್ಕೂಲ್ ಆವರಣದಲ್ಲಿ ಭಾನುವಾರ ಸ್ಥಳೀಯ ಆಡಳಿತದಿಂದ ಆವಣದ ಸ್ವಚ್ಛತೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಆಂಧ್ರ ಗಡಿಯ ಎಲ್ಲ ಕನ್ನಡಿಗರು ದೇಶದ ರಾಷ್ಟ್ರೀಯ ಹಬ್ಬದಲ್ಲಿ ಪಾಲ್ಗೊಳ್ಳಬೇಕು. ಗ್ರಾಮದ ಎಲ್ಲ ಶಾಲಾ ಕಾಲೇಜು ಮುಖ್ಯಸ್ಥರು ಅಂದು ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮೆರವಣಿಗೆ ಮೂಲಕ ಮೈದಾನಕ್ಕೆ ಬರಬೇಕು ಎಂದು ತಿಳಿಸಿದರು.
ಉಪಾಧ್ಯಕ್ಷೆ ಸರೋಜಾ ಚಿತ್ತಯ್ಯ ಮಾತನಾಡಿ, ರಾಷ್ಟ್ರೀಯ ಹಬ್ಬದಲ್ಲಿ ಪಾಲ್ಗೊಳ್ಳುವ ಎಲ್ಲ ಮಕ್ಕಳಿಗೂ ಸಿಹಿ ಹಂಚಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರ ಮತ್ತು ಪ್ರೋತ್ಸಾಹ ಅಗತ್ಯ ಎಂದರು.
ಕೆಪಿಎಸ್ ಶಾಲಾ ಕಾಲೇಜು ಆವರಣದಲ್ಲಿ ಜೆಸಿಬಿ ಮತ್ತಿತರ ವಾಹನಗಳ ಮೂಲಕ ಸ್ವಚ್ಛತಾ ಕಾರ್ಯ ಭರದಿಂದ ಕೈಗೊಳ್ಳಲಾಯಿತು.
ಪಿಡಿಒ ದೇವರಾಜು, ಸದಸ್ಯರಾದ ಕೃಷ್ಣಪ್ಪ, ರುದ್ರೇಶ, ನಾಗರಾಜು, ಓಬಳೇಶ, ಬೊಮ್ಮಕ್ಕ, ತಿಪ್ಪಮ್ಮ, ಪ್ರಕಾಶ, ಜಿಮ್ ರವಿ, ತಿಮ್ಮಯ್ಯ, ರಾಜು, ನಾಗರಾಜು ಶಿಕ್ಷಕ ಮಂಜುನಾಥ ಗ್ರಾಮಸ್ಥರು ಇದ್ದರು.