ಎನ್.ಆರ್.ಪುರ ಶ್ರೀ ಕಾಳಿಕಾಂಬಾ ದೇವಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಮುರುಡೇಶ್ವರದಿಂದ ಬಂದ ಕಲ್ಲಿನ ಪರಿಕರಗಳನ್ನು ಶಾಸಕ ಟಿ.ಡಿ.ರಾಜೇಗೌಡ ಬರಮಾಡಿಕೊಂಡರು. ಕೃಷ್ಣಯ್ಯ ಆಚಾರ್, ಕೆ.ಸಿ.ರಾಜೇಶ್ ಆಚಾರ್, ಅರವಿಂದಾಚಾರ್, ಜಯಶ್ರೀ, ಸುಮತಿ, ಜಯಲಕ್ಷ್ಮೀ ಇತರರಿದ್ದರು.  
ಜಿಲ್ಲೆ

ಮುರುಡೇಶ್ವರದಿಂದ ಕಲ್ಲಿನ ಪರಿಕರ ಆಗಮನ

ಎಸ್.ಎನ್.ರವೀಂದ್ರ

ನ್.ಆರ್.ಪುರ: ಪಟ್ಟಣದ ಹಳೇಮಂಡಗದ್ದೆ ರಸ್ತೆಯಲ್ಲಿರುವ ಶ್ರೀ ಕಾಳಿಕಾಂಬಾ ದೇವಿ ನೂತನ ದೇವಸ್ಥಾನ ನಿರ್ಮಾಣಕ್ಕೆ ಮುರುಡೇಶ್ವರದಿಂದ ಕಲ್ಲಿನ ಪರಿಕರಗಳನ್ನು ತರಲಾಯಿತು.

ಕಲ್ಲಿನ ಪರಿಕರಗಳಿಗೆ ಶಾಸಕ ಟಿ.ಡಿ.ರಾಜೇಗೌಡ ಪೂಜೆ ಸಲ್ಲಿಸಿ ಬರ ಮಾಡಿಕೊಂಡರು. ವಿಶ್ವಕರ್ಮ ಸಮಾಜದ ಕ್ಷೇತ್ರಾಧ್ಯಕ್ಷ ಕೃಷ್ಣಯ್ಯ ಆಚಾರ್, ತಾಲೂಕು ಅಧ್ಯಕ್ಷ ಕೆ.ಸಿ.ರಾಜೇಶ್ ಆಚಾರ್, ತಾಲೂಕು ವಿಶ್ವಕರ್ಮ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಕೃಷ್ಣಯ್ಯ ಆಚಾರ್, ಕಾರ್ಯದರ್ಶಿ ಸುಮತಿ ಅಶೋಕಾಚಾರ್, ಖಜಾಂಚಿ ಜಯಲಕ್ಷ್ಮೀ ಉಪೇಂದ್ರಾಚಾರ್, ಸಂಘದ ಸದಸ್ಯರು, ಮಹಿಳೆಯರು ಪಾಲ್ಗೊಂಡಿದ್ದರು.