ಜಿಲ್ಲೆ

ಶ್ರೀ ಬಸ್ತಿಮಠಕ್ಕೆ ಶ್ರೀಕುಂಥುಸಾಗರ ಮುನಿ ಮಹರಾಜರ ಆಗಮನ

ಎನ್.ಆರ್.ಪುರ: ಪಟ್ಟಣದ ಅತಿಶಯ ಕ್ಷೇತ್ರ, ಶ್ರೀ ಜ್ವಾಲಾಮಾಲಿನಿ ಅಮ್ಮನವರ ಕ್ಷೇತ್ರಕ್ಕೆ ಪರಮಪೂಜ್ಯ ಆಚಾರ್ಯ ಮುನಿಶ್ರೀ 108 ಕುಂಥುಸಾಗರ ಮುನಿ ಮಹರಾಜರು ತಮ್ಮ ಆರು ಶಿಷ್ಯರೊಂದಿಗೆ ಶ್ರೀಪೆನುಗೊಂಡೆ ದಿಗಂಬರ ಜೈನ ಮಹಾಸಂಸ್ಥಾನ ಮಠಕ್ಕೆ ಆಗಮಿಸಿದರು.

ಶ್ರೀಗಳನ್ನು ಶ್ರೀಜ್ವಾಲಾಮಾಲಿನಿ ದೇವಿ ಸರ್ಕಲ್‌ನಿಂದ ಶ್ರೀ ಮಠದವರೆಗೆ ಪೂರ್ಣಕುಂಭ ಹಾಗೂ ಮಂಗಳವಾದ್ಯಗಳೊಂದಿಗೆ ಭಕ್ತಿ ಪೂರ್ವಕ ಸ್ವಾಗತ ದೊಂದಿಗೆ ಬರಮಾಡಿಕೊಳ್ಳಲಾಯಿತು. ಕ್ಷೇತ್ರದ ಪೀಠಾಧಿಪತಿ ಶ್ರೀ ಲಕ್ಷ್ಮೀಸೇನಾ ಭಟ್ಟಾರಕ ಸ್ವಾಮೀಜಿ ಪಾದಪೂಜೆ ಮಾಡಿ ಬರಮಾಡಿಕೊಂಡರು. ಭಗವಾನ್ ಶ್ರೀ1008 ಚಂದ್ರಪ್ರಭ ತೀಥರ್ಂಕರ ಬಸದಿಯಲ್ಲಿ ಹಾಗೂ ಮಹಾಮಾತೆ ಶ್ರೀಜ್ವಾಲಾಮಾಲಿನಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ಪಟ್ಟಣದ ಜೈನ ಸಮುದಾಯದ ಶ್ರಾವಕರು ಪಾಲ್ಗೊಂಡಿದ್ದರು.