ಬೆಳಗಾವಿ: ಮಾದಕ ವಸ್ತು ಹಾಗೂ ಅಕ್ರಮವಾಗಿ ಶಸ್ತ್ರಾಸ್ತ್ರ ಇಟ್ಟುಕೊಂಡು ಓಡಾಡುತ್ತಿದ್ದ ಪ್ರಕರಣದಡಿ ಪೊಲೀಸರು ಏಳು ಜನರನ್ನು ಬಂಧಿಸಿ, 1.58 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಸಮರ್ಥ ನಗರದ ಅನಿಕೇತ ಲೋಹಾರ (27), ಮಚ್ಛೆ ಜಯನಗರದ ಅಲ್ತಮಶ್ ಅಯೂಬಖಾನ್ ಪಠಾಣ. (25), ಟಿಪ್ಪುಸುಲ್ತಾನ ನಗರದ ಸದ್ದಾಂಹುಸೇನ ಸರ್ದಾರ್ ಪಠಾಣ (24), ಶಿವಬಸವ ನಗರದ ಗ್ಯಾಂಗವಾಡಿಯ ರವಿ ಲೊಂಡೆ (50), ವಿಜಯನಗರದ ಹಿಂಡಲಗಾದ ಪ್ರಸಾದ ಪರಶಭೋಗ (23) , ರಾಮನಗರದ ಅಶೋಕ ಪಾಟೀಲ (45) ಹಾಗೂ ಸಂಭಾಜಿ ಗಲ್ಲಿಯ ಪ್ರಜ್ವಲ ಕಿತ್ತವಾಡಕರ (28) ಬಂಧಿತರು.
ಅಕ್ರಮ ಮಾದಕ ವಸ್ತು ಸಂಗ್ರಹ ಹಾಗೂ ಮಾರಾಟ ಮಾಡುತ್ತಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಮಾರ್ಕೆಟ್, ಮಾಳಮಾರುತಿ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ 48,400 ರೂ. ಮೌಲ್ಯದ 60.36 ಗ್ರಾಂ ಹೆರಾಯಿನ್, 5,900 ರೂ. ಮೌಲ್ಯದ 255 ಗ್ರಾಂ ಗಾಂಜಾ, ಒಂದು ಆಟೋ ಸೇರಿ ಒಟ್ಟು 1,58,580 ರೂ. ಮೌಲ್ಯದ ವಸ್ತು ಹಾಗೂ ಮಾರಕಾಸ್ತ್ರ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ ಹಳೇ ಪಿಬಿ ರಸ್ತೆಯ ಓವರ್ ಬ್ರಿಡ್ಜ್ ಕೆಳಗಡೆ ಮಾರಕಾಸ್ತ್ರ ಇಟ್ಟುಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.