ಕ್ರೈಸ್ತ ಭಕ್ತರು, ಕ್ರೈಸ್ತ ಧರ್ಮವನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಸೋಮವಾರಪೇಟೆಯ ಜಯವೀರಮಾತೆ ದೇವಾಲಯದ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಲಾರೆನ್ಸ್, ಶೀಲಾ, ಡೆಂಜಿಲ್, ಸುನಿಲ್ ಸೇರಿದಂತೆ ಇತರರು ಭಾಗವಹಿಸಿದ್ದರು. 
ಜಿಲ್ಲೆ

ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಿ

ಸೋಮವಾರಪೇಟೆ: ಕ್ರೈಸ್ತ ಧರ್ಮ ಹಾಗೂ ಯೇಸು ಕ್ರಿಸ್ತರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ನೇತೃತ್ವದಲ್ಲಿ ಕ್ರೈಸ್ತ ಭಕ್ತಾದಿಗಳು ಭಾನುವಾರ ಪ್ರತಿಭಟನೆ ನಡೆಸಿದರು.

ಜಯವೀರಮಾತೆ ದೇವಾಲಯದ ಮುಂಭಾಗ ಸೇರಿದ ಪ್ರತಿಭಟನಾಕಾರರು ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಪಟ್ಟಣದ ಪೊಲೀಸರಿಗೆ ದೂರು ನೀಡಿದರು.

ಲೋಕನಾಥ್, ಮನುಮಾದಪ್ಪ ಎಂಬ ಹೆಸರಿನ ಖಾತೆಯಲ್ಲಿ ಕ್ರಿಸ್ಮಸ್ ಹಬ್ಬದ ಬಗ್ಗೆ ಹಾಗೂ ಯೇಸು ಅವರ ವಿರುದ್ಧ ಅವಹೇಳನಕಾರಿ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ. ಸಮಾಜದಲ್ಲಿ ಶಾಂತಿಯುತಾಗಿ ಜೀವನ ನಡೆಸುತ್ತಿರುವ ಕ್ರೈಸ್ತರ ಭಾವನೆಗಳಿಗೆ ನೋವಾಗಿದೆ. ಪೊಲೀಸರು ಕೂಡಲೇ ಕಾನೂನುಕ್ರಮ ತೆಗೆದುಕೊಳ್ಳಬೇಕು ಎಂದು ಅಸೋಸಿಯೇಷನ್ ಕಾರ್ಯಾಧ್ಯಕ್ಷ ವಿ.ಎ.ಲಾರೆನ್ಸ್ ಹೇಳಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷೆ ಶೀಲಾ ಡಿಸೋಜ, ತಾಲೂಕು ಅಧ್ಯಕ್ಷ ಡೆಂಜಿಲ್ ವರ್ಗಿಸ್, ಕಾರ್ಯದರ್ಶಿ ಸಾಲೊಮನ್. ಉಪಾಧ್ಯಕ್ಷರಾದ ಕೆ.ಜೆ.ಸುನಿಲ್, ವಿನ್ಸಿ ಡಿಸೋಜ ಮತ್ತಿತರರು ಇದ್ದರು.