ದಾವಣಗೆರೆ ಜಿಲ್ಲೆಯ ಭಾನುವಳ್ಳಿ ಗ್ರಾಮದಲ್ಲಿ ಮದಕರಿ ನಾಯಕ ಮಹಾದ್ವಾರ ಮತ್ತು ಪುತ್ಥಳಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ಬುಧವಾರ ಮನವಿ ಸಲ್ಲಿಸಲಾಯಿತು. ಮಹಾಸಭಾ ಜಿಲ್ಲಾಧ್ಯಕ್ಷ ಹನುಮೇಶ ನಾಯಕ, ಪದಾಕಾರಿಗಳಾದ ಡಾ.ಶಾರದಾ ಹುಲಿನಾಯಕ, ಪ್ರಭು ಹುಲಿನಾಯಕ, ಅರ್ಜುನ ನಾಯಕ, ಗೋವರ್ಧನ ನಾಯಕ, ಜೆ.ಆಂಜಿಜೇಯ ನಾಯಕ ಇದ್ದರು. 
ಜಿಲ್ಲೆ

ಮದಕರಿ ನಾಯಕ ಪುತ್ಥಳಿ ಭಗ್ನಗೊಳಿಸಿದವರನ್ನು ಬಂಧಿಸಿ

ರಾಚಯ್ಯ ಸ್ವಾಮಿ

ರಾಯಚೂರು: ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದಲ್ಲಿನ ಮದಕರಿ ನಾಯಕ ಮಹಾದ್ವಾರ ಮತ್ತು ಪುತ್ಥಳಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಒತ್ತಾಯಿಸಿದೆ.
ಮಹಾಸಭಾ ನಿಯೋಗ ಸ್ಥಳೀಯ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಬುಧವಾರ ಮನವಿ ಸಲ್ಲಿಸಿ, ಪುತ್ಥಳೀಯನ್ನು ಅಧಿಕಾರಿಗಳ ಕುಮ್ಮಕ್ಕಿನಿಂದ ಭಗ್ನಗೊಳಿಸಲಾಗಿದ್ದು, ಸ್ಥಳದಲ್ಲಿ ಅಧಿಕಾರಿಗಳಿದ್ದರೂ ತಡೆದಿಲ್ಲ ಎಂದು ದೂರಿದರು.
1190ರಲ್ಲಿ ಮದಕರಿ ನಾಯಕ ಮಹಾದ್ವಾರ ಮತ್ತು ಪುತ್ಥಳಿಯನ್ನು ಉದ್ಘಾಟನೆ ಮಾಡಲಾಗಿತ್ತು. ಮಾ.11ರಂದು ಪುತ್ಥಳಿ ಮತ್ತು ಮಹಾದ್ವಾರವನ್ನು ಭಗ್ನಗೊಳಿಸುವ ಕೆಲಸ ಮಾಡಲಾಗಿದೆ. ಈ ಕುರಿತು ಬಾಳೆಬನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದುವರೆಗೂ ಯಾರ ವಿರುದ್ಧವೂ ಕ್ರಮಕೈಗೊಂಡಿಲ್ಲ.
ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸುವುದರ ಜತೆಗೆ ಅದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಪುನಃ ಮಹಾದ್ವಾರ ನಿರ್ಮಾಣ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ನಿಯೋಗದಲ್ಲಿ ಮಹಾಸಭಾ ಜಿಲ್ಲಾಧ್ಯಕ್ಷ ಹನುಮೇಶ ನಾಯಕ, ಪದಾಕಾರಿಗಳಾದ ಡಾ.ಶಾರದಾ ಹುಲಿನಾಯಕ, ಪ್ರಭು ಹುಲಿನಾಯಕ, ಅರ್ಜುನ ನಾಯಕ, ಗೋವರ್ಧನ ನಾಯಕ, ಜೆ.ಆಂಜಿಜೇಯ ನಾಯಕ ಇದ್ದರು.