ಮಸ್ಕಿ ತಾಲೂಕಿನ ಕ್ಯಾದ್ರಹಾಳ ಗ್ರಾಮದಲ್ಲಿ ವಿಕಲಚೇತನ ದಂಪತಿಗಳ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವರನ್ನು ಬಂಸುವಂತೆ ಒತ್ತಾಯಿಸಿ ರಾಯಚೂರಿನ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಸೋಮವಾರ ಮನವಿ ಸಲ್ಲಿಸಲಾಯಿತು. ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನಪ್ಪ ಗೂಳಪ್ಪನವರ್, ಪದಾಕಾರಿಗಳಾದ ಕರಿಯಪ್ಪ ಅಚ್ಚೊಳ್ಳಿ, ಧರ್ಮರೆಡ್ಡಿ, ಭೀಮಸೇನ, ದಿಲ್‌ರಾಜಾ, ಮುರಳಿ, ನರಸಿಂಹಲು, ಟಿ.ವಿ.ವೀರೇಶ, ಸಂತೋಷಿಮಾ ಇದ್ದರು. 
ಜಿಲ್ಲೆ

ಅತ್ಯಾಚಾರಕ್ಕೆ ಯತ್ನಿಸಿದವರನ್ನು ಬಂಧಿಸಿ

ರಾಚಯ್ಯ ಸ್ವಾಮಿ

ರಾಯಚೂರು: ಮಸ್ಕಿ ತಾಲೂಕಿನ ಮ್ಯಾದ್ರಹಾಳ ಗ್ರಾಮದಲ್ಲಿ ವಿಕಲಚೇತನ ದಂಪತಿಗಳ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವರನ್ನು ಬಂಧಿಸುವಂತೆ ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ಘಟನೆಗೆ ಸಂಬಂಸಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಕೇವಲ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಉಳಿದ ಆರು ಜನರನ್ನು ಬಂಸುವಂತೆ ಆಗ್ರಹಿಸಿದರು.
ವಿಕಲಚೇತನ ದಂಪತಿಗಳ ಕುಟುಂಬಕ್ಕೆ ಜೀವ ಬೆದರಿಕೆಯಿದ್ದು, ರಕ್ಷಣೆ ನೀಡಬೇಕು. ಅತ್ಯಾಚಾರಕ್ಕೆ ಯತ್ನಿಸಿದ ಎಲ್ಲರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನಪ್ಪ ಗೂಳಪ್ಪನವರ್, ಪದಾಕಾರಿಗಳಾದ ಕರಿಯಪ್ಪ ಅಚ್ಚೊಳ್ಳಿ, ಧರ್ಮರೆಡ್ಡಿ, ಭೀಮಸೇನ, ದಿಲ್‌ರಾಜಾ, ಮುರಳಿ, ನರಸಿಂಹಲು, ಟಿ.ವಿ.ವೀರೇಶ, ಸಂತೋಷಿಮಾ, ರಾಧಿಕಾ, ರಾಜೇಶ್ವರಿ, ಚಂದ್ರಲಿಂಗ, ನಾಗರಾಜ, ಶ್ರೀನಿವಾಸ, ಹನುಮಂತು ಕಂಟೆಪ್ಪ ಪಾಲ್ಗೊಂಡಿದ್ದರು.