ಬಾದಾಮಿ: ಪ್ರವಾದಿ ಮಹ್ಮದರ ಕುರಿತು ಅವಹೇಳಕಾರಿಯಾಗಿ ಮಾತನಾಡಿದ ಮಹಾರಾಷ್ಟ್ರದ ರಾಮಗಿರಿ ಮಹಾರಾಜರನ್ನು ಸರ್ಕಾರ ಕೂಡಲೇ ಬಂಧಿಸಬೇಕೆಂದು ಪುರಸಭೆ ಮಾಜಿ ಅಧ್ಯಕ್ಷ ರಾಜಮಹಮ್ಮದ ಬಾಗವಾನ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಸರ್ವ ಜನಾಂಗ ಶಾಂತಿಯ ತೋಟ. ಭಾರತದಲ್ಲಿ ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಸೇರಿ ಎಲ್ಲರೂ ಒಂದೇ ಕುಟುಂಬ ಸದಸ್ಯರಂತೆ ಬದುಕುತ್ತಿದ್ದಾರೆ. ಮಹಾತ್ಮರು ಎನಿಸಕೊಂಡವರು ಸಮಾಜದಲ್ಲಿ ಒಳಿತು ಬಯಸಬೇಕು. ಕೋಮುವಾದಕ್ಕೆ ದಾರಿ ಮಾಡಿಕೊಡಬಾರದು. ಇಂತ ಹೇಳಿಕೆಗಳಿಂದ ವೈಮನಸ್ಸು ಉಂಟಾಗುತ್ತದೆ. ರಾಜ್ಯದ ಸಭೆಯಲ್ಲಿ ಪ್ರವಾದಿ ಮಹಮ್ಮದ್ ಅವರ ಬಗ್ಗೆ ತೀರಾ ಲಘುವಾಗಿ ಮಾತನಾಡಿದ್ದು, ಜಗತ್ತಿನ ಸಮಸ್ತ ಮುಸ್ಲಿಮರಿಗೆ ಹಾಗೂ ಪ್ರವಾದಿಗಳ ಅನುಯಾಯಿಗಳ ಮನಸ್ಸಿಗೆ ಬಹಳ ನೋವುಂಟು ಮಾಡಿದೆ. ಕೂಡಲೇ ಮಹಾರಾಷ್ಟ್ರ ಸರ್ಕಾರ ರಾಮಗಿರಿ ಮಹಾರಾಜರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.
ಜಮೀಲ ನಾಯಕ ಮಾತನಾಡಿಮ ಪ್ರವಾದಿ ಮಹ್ಮದರ ಕುರಿತು ಅವಹೇಳಕಾರಿಯಾಗಿ ಮಾತನಾಡಿದ ಮಹಾರಾಷ್ಟ್ರದ ರಾಮಗಿರಿ ಮಹಾರಾಜರ ವಿರುದ್ಧ ಸೆ.6 ರಂದು ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬಳಿಕ ಫಿಕಾರ್ಡ್ ಬ್ಯಾಂಕ್ ಆವರಣದಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ಭಾಗವಹಿಸಬೇಕೆಂದು ಮನವಿ ಮಾಡಿದರು.
ಮುಸ್ಲಿಂ ಸಮಾಜದ ಮುಖಂಡರಾದ ಜನಾಬ್ ಅಬ್ದುಲ್ ವಹಾಬ್ ಖಾಜಿ, ಮಹಮ್ಮದಅಲಿ ಖಲೀಫ್, ಅಬ್ದುಲ್ ರಜಾಕ್ ಅತ್ತಾರ, ರಹೆಮಾನ ಕೆರಕಲಮಟ್ಟಿ, ಅಬ್ದುಲ್‌ಕಾದೀರ ಜಮಾದಾರ, ಶೌಕತ್‌ಅಲಿ ವಾಚಮೇಕರ್, ಶಬ್ಬಿರ ಬಾಣದಾರ, ಬಸೀರ ಅತ್ತಾರ, ನೂರಅಹ್ಮದ ಅತ್ತಾರ ಇದ್ದರು.