ಜಿಲ್ಲೆ

ಇಬ್ಬರು ಕಳ್ಳರ ಬಂಧನ

reportermys

ಮೈಸೂರು: ಇಬ್ಬರು ಕಳ್ಳರನ್ನು ಬಂಧಿಸಿರುವ ನಗರ ಸಿಸಿಬಿ ಪೊಲೀಸರು 10 ಲಕ್ಷ ರೂ. ಮೌಲ್ಯದ 136 ಗ್ರಾಂ ಚಿನ್ನಾಭರಣ, 1 ದ್ವಿಚಕ್ರ ವಾಹನ, 3 ಮಾರುತಿ 800 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.


ಸಿಸಿಬಿ ಪೊಲೀಸರು ಕಳೆದ ತಿಂಗಳು ಒಬ್ಬ ಆರೋಪಿಯನ್ನು ಬಂಧಿಸಿದ್ದರು. ಆತ ನೀಡಿದ ಮಾಹಿತಿ ಮೇರೆಗೆ ಡಿ.6ರಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಈ ಆರೋಪಿಗಳು ವಿಚಾರಣೆ ವೇಳೆ ಮೈಸೂರು ನಗರ ಸೇರಿದಂತೆ ವಿವಿಧ ಜಿಲ್ಲಾ ವ್ಯಾಪ್ತಿಗಳಲ್ಲಿ ಕಳ್ಳತನ ಮಾಡಿರುವುದಾಗಿ ನೀಡಿದ ಮಾಹಿತಿ ಮೇರೆಗೆ ಆರೋಪಿಗಳಿಂದ ಒಟ್ಟು 7 ಪ್ರಕರಣಗಳಿಗೆ ಸಂಬಂಧಪಟ್ಟಂತೆ ಕಳವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.


ಪತ್ತೆ ಕಾರ್ಯದಿಂದ ಮೈಸೂರು ನಗರ ಜಯಲಕ್ಷ್ಮೀಪುರಂ, ಕುವೆಂಪುನಗರ, ಸರಸ್ವತಿಪುರಂ ಠಾಣಾ ವ್ಯಾಪ್ತಿಯಲ್ಲಿ ತಲಾ ಒಂದು ಕಳವು ಪ್ರಕರಣ, ನಜರ್‌ಬಾದ್ ಠಾಣೆಯಲ್ಲಿ ಒಂದು ಸುಲಿಗೆ ಪ್ರಕರಣ, ಹಾಸನ ಟೌನ್, ಕೆ.ಆರ್.ಪೇಟೆ ಟೌನ್, ಬೀರೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಕಳವು ಪ್ರಕರಣಗಳು ಪತ್ತೆಯಾಗಿವೆ.