ಶಿವಮೊಗ್ಗ: ಶಿವಮೊಗ್ಗ ವೃತ್ತದ ಲಕ್ಕವಳ್ಳಿ ವಲಯದ ವ್ಯಾಪ್ತಿಯ ಜೋಡಿ ಕೋಡಿಹಳ್ಳಿ ಗ್ರಾಮದ ಬಳಿಯ ಭದ್ರಾ ಮುಖ್ಯ ನಾಲೆಯ ದಂಡೆ ಮೇಲೆ ಶ್ರೀಗಂಧ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆಯವರು ಬಂಧಿಸಿದ್ದಾರೆ.
ತರಿಕೆರೆ ತಾಲೂಕಿನ ಕರಕುಚ್ಚಿ ಗ್ರಾಮದ ರಾಮು, ಇಲಿಯಾಜ್ ಬಂಧಿತರು. ಬಂಧಿತರಿಂದ 12.1 ಕೆಜಿ ಶ್ರೀಗಂಧದ ಚಕ್ಕೆಗಳು, ಬೈಕ್ ಅನ್ನು ಜಪ್ತಿ ಮಾಡಲಾಗಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಭದ್ರಾವತಿ ಡಿಸಿಎಫ್ ಆಶಿಶ್ ರೆಡ್ಡಿ ಹಾಗೂ ಎಸಿಎಫ್ ಎಸ್.ಓ.ದಿನೇಶ್ ಅವರ ಮಾರ್ಗದರ್ಶನದಲ್ಲಿ ಲಕ್ಕವಳ್ಳಿ ವಲಯದ ಅರಣ್ಯಾಧಿಕಾರಿ ಬಿ.ಜೆ.ವಾಗೀಶ, ಉಪವಲಯ ಅರಣ್ಯ ಅಧಿಕಾರಿಗಳಾದ ಕೆ.ಎಸ್.ಮನೋಜ್, ಬಿ.ಜಗದೀಶ್, ಎ.ಶಂಕರನಾರಾಯಣ, ಕೆ.ಸಿ.ಯೋಗಾನಂದ, ಮಾರುತಿ ಬಾಬು, ಗಸ್ತು ಅರಣ್ಯಾಧಿಕಾರಿಗಳಾದ ಮಂಜುನಾಥ ಮೊಗೇರ, ಸುಬ್ರಹ್ಮಣ್ಯ, ಸಚಿನ್ ಡೆಂಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.