ಸಾಗುವನಿ ಮರ ಸಾಗಿಸುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದರು. 
ಜಿಲ್ಲೆ

ಸಾಗುವನಿ ಮರ ಸಾಗಿಸುತ್ತಿದ್ದ ಇಬ್ಬರ ಬಂಧನ

ಶಿವಮೊಗ್ಗ: ಶಿವಮೊಗ್ಗ ಗ್ರಾಮಾಂತರ ಭಾಗದ ಹಾಯ್ಹೊಳೆಯಲ್ಲಿ ಬೆಲೆಬಾಳುವ ಮರಗಳನ್ನು ತುಂಡರಿಸಿ ಸಾಗಿಸುವ ವೇಳೆ ಅರಣ್ಯ ಇಲಾಖೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದು ಮೂವರು ಪರಾರಿಯಾಗಿದ್ದಾರೆ. ಬಂಧಿತರಿಂದ 12 ಸಾಗುವಾನಿ ಮರ, ಎರಡು ಮೊಬೈಲ್, ಒಂದು ಮಹೇಂದ್ರ ಬುಲೇರೋ, ಬಜಾಜ್ ಪ್ಯಾಸೆಂಜರ್ ಆಟೋ ವಶಕ್ಕೆ ಪಡೆದಿದ್ದಾರೆ.

ಹಾಯ್ಹೊಳೆ ಭಾರತಿನಗರದ ಶರತ್, ಮಂಜುನಾಥ್ ಬಂಧಿತರು. ವಿಷ್ಣು, ಪಳನಿ ಮತ್ತು ತಿರುಪತಿ ಎಂಬುವರು ಪರಾರಿಯಾಗಿದ್ದು ಬಂಧನಕ್ಕೆ ತಂಡ ರಚನೆ ಮಾಡಲಾಗಿದೆ. ಹಾಯ್ಹೊಳೆ ಭಾಗದ ವನ್ಯಜೀವಿ ವಲಯದಲ್ಲಿ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿ ಸಾಗಿಸಲು ಯತ್ನಿಸುವಾಗ ಆರ್‌ಎಫ್‌ಒ ಪ್ರದೀಪ್ ಹಾಲಭಾವಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಡಿಆರ್‌ಎಫ್‌ಒ ಚನ್ನಬಸಪ್ಪ ಸಣ್ಣಗೌಡ್ರ, ಸಿಬ್ಬಂದಿಗಳಾದ ಪ್ರಮೋದ್ ಕುಮಾರ್, ಮಂಜುನಾಥ್, ಪ್ರಸನ್ನಕುಮಾರ್, ಪಲ್ಲವಿ, ಗಸ್ತು ಅರಣ್ಯ ಪಾಲಕರಾದ ಸಲೀಂ, ರಮೇಶ್, ಸಂತೋಷ್, ಪ್ರಮೋದ್ ರೆಡ್ಡರ್, ವಾಹನ ಚಾಲಕ ಸುನಿಲ್, ಮಹೇಶ್, ವೃಷಭ, ಶರಣ, ರಾಯುಡು ಡಿಸೋಜಾ ಹಾಗೂ ಪ್ರಜ್ವಲ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.