ಜಿಲ್ಲೆ

ಪೊಲೀಸ್ ಮೇಲೆ ಹಲ್ಲೆ ಮಾಡಿದ್ದ ಮೂವರ ಬಂಧನ

ಕೆ.ಆರ್.ಸಾಗರ : ದಸರಾ ಹಬ್ಬದ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದವರನ್ನು ಬಂಧಿಸಲಾಗಿದೆ. ರವಿಕುಮಾರ್, ಯೋಗೇಶ್, ಪರಶಿವಮೂರ್ತಿ ಆರೋಪಿಗಳು.

ಮೊಗರಹಳ್ಳಿ ಗ್ರಾಮದ ಕೆ.ಆರ್.ಸಾಗರ-ಮೈಸೂರು ಮುಖ್ಯರಸ್ತೆ ಬಳಿ ಟ್ರಾಫಿಕ್ ನಿಯಂತ್ರಣ ಮಾಡುತ್ತಿದ್ದ ಕೆ.ಆರ್.ಸಾಗರ ಠಾಣೆಯ ಕಾನ್ಸ್‌ಟೇಬಲ್ ಪ್ರವೀಣ್‌ಕುಮಾರ್ ಮೇಲೆ ಮೂವರು ಹಲ್ಲೆ ಮಾಡಿದ್ದರು. ಮಧ್ಯಸೇವನೆ ಮಾಡಿದ ಯುವಕರು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದರು. ಇದನ್ನು ಪ್ರಶ್ನೆ ಮಾಡಿದ ಪ್ರವೀಣ್ ಕುಮಾರ್ ಜತೆ ಜಗಳಮಾಡಿ ಹಲ್ಲೆ ಮಾಡಿ ಪರಾರಿಯಾಗಿದ್ದರು.

ಕೆ.ಆರ್.ಸಾಗರ ಪೊಲೀಸ್ ಠಾಣೆ ವೃತ್ತ ನಿರೀಕ್ಷ ಪುನೀತ್ ನೇತೃತ್ವದಲ್ಲಿ ತನಿಖೆ ಕೈಗೊಂಡು ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.