ಹುಬ್ಬಳ್ಳಿ: ಅಕ್ರಮ ಗಾಂಜಾ ಮಾರಾಟ ಹಾಗೂ ಖರೀದಿಗೆ ಆಗಮಿಸಿದ್ದ 13 ಜನರನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರದ ಗೂಡ್‌ಶೆಡ್ ರೋಡ್‌ನಲ್ಲಿದ್ದ ನವಾಜ್, ಹಜರತ್, ಅಹ್ಮದ್‌ಖಾನ್, ಪಾಂಡು, ಶಂಕರನಾಗ, ಆಕಾಶ, ಅಜುರುದ್ದೀನ, ವೆಂಕಟೇಶ, ಮಹಮ್ಮದ್ ಗೌಸ್, ಸರ್ಫರಾಜ, ನೂರ್‌ಅಹ್ಮದ್, ಆರ್ಯನ್ ಹಾಗೂ ಶಿಖಂದರ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1 ಕೆಜಿ 227 ಗ್ರಾಂ ಗಾಂಜಾ, ಮೂರು ಮೊಬೈಲ್ ಫೋಣ್ ಹಾಗೂ 6 ಸಾವಿರ ರೂ.ನಗದು ಜಪ್ತಿ ಮಾಡಿದ್ದಾರೆ.
ಮೀರಜ್‌ನಿಂದ ಗಾಂಜಾ ತಂದಿದ್ದ ನವಾಬ್ ಎಂಬಾತ, ದಾವಣಗೆರೆಯಿಂದ ಆಗಮಿಸಿದ್ದ ವ್ಯಕ್ತಿಗೆ ಮಾರಾಟ ಮಾಡಲು ಮುಂದಾಗಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಪೊಲೀಸರು ಪ್ರಕರಣ ಭೇದಿಸಿದ್ದಾರೆ. ಕಳೆದ ಒಂದು ವಾರದಲ್ಲಿ ಗಾಂಜಾ ಮಾರಾಟ ಮತ್ತು ಖರೀದಿ ಮಾಡಲು ಮುಂದಾಗಿದ್ದ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.